ಜಿಲ್ಲೆ

ಎಚ್.ವಿಶ್ವನಾಥ್ ಪುತ್ರ‌ನ ವಿರುದ್ಧ ಎಫ್‌ಐಆರ್!

arunakunigal

ಮೈಸೂರು: ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ, ಆ ಜಮೀನಿನ ಮಾಲೀಕನಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪುತ್ರ‌ ಸೇರಿ 8 ಜನರ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿಶ್ವನಾಥ್ ಪುತ್ರ‌, ಜಿಪಂ ಸದಸ್ಯ ಅಮಿತ್ ದೇವರಹಟ್ಟಿ ನಕಲಿ ದಾಖಲೆ‌ ಸೃಷ್ಟಿಸಿ ನಗರದ ಹಿನಕಲ್ ಬಳಿಯ ಖಾಲಿ‌ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ನಿರ್ಮಿಸುತ್ತಿದ್ದರು. ಇದನ್ನು ತಡೆಯಲು ಮುಂದಾದ ನಿವೇಶನದ ಮೂಲ ವಾರಸುದಾರ ಯೋಗೀಶ್ ಮತ್ತು ಅವರ ಕುಟುಂಬಕ್ಕೆ ಅಮಿತ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದನ್ನೂ ಓದಿರಿ ಸೆಕ್ಸ್​ಗೆ ಒಲ್ಲೆ ಎಂದ ಪತ್ನಿಯನ್ನ ಗುಂಡಿಕ್ಕಿ ಕೊಂದ! ಬಳಿಕ ತನ್ನ 3 ಹೆಣ್ಣುಮಕ್ಕಳನ್ನೂ ಜೀವಂತವಾಗೇ ನಾಲೆಗೆ ಎಸೆದ!

ಯೋಗೀಶ್ ಕೊಟ್ಟ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 504, 506ರಡಿ ಅಮಿತ್, ಪಟೇಲ್, ಅನೂಪ್, ವೈಕುಂಠಾಚಾರ್ ಸೇರಿದಂತೆ ಎಂಟು ಮಂದಿ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಅಮಿತ್​ ಎ3 ಆರೋಪಿ.