ಜಿಲ್ಲೆ

ಎಸಿಬಿ ರದ್ದು ಮಾಡಿ ಹೈಕೋರ್ಟ್​ ಮಹತ್ವದ ಆದೇಶ: ಈ ಕುರಿತು ಸಿದ್ದರಾಮಯ್ಯರ ಮೊದಲ ಪ್ರತಿಕ್ರಿಯೆ ಹೀಗಿದೆ...

arunakunigal

ಚಿಕ್ಕಬಳ್ಳಾಪುರ: .ಎಸಿಬಿ ರಚನೆಯನ್ನೇ ರದ್ದು ಮಾಡಿರುವ ಹೈಕೋರ್ಟ್​, ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಮಹತ್ವದ ಆದೇಶ ಹೊರಡಿಸಿದೆ. ಲೋಕಾಯುಕ್ತ ಪೊಲೀಸ್ ಠಾಣೆಗಳನ್ನು ಮರು ಸ್ಥಾಪಿಸಿ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ನೀಡುವಂತೆ ಸೂಚಿಸಿದೆ. ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಕೊಟ್ಟ ಮೊದಲ ಪ್ರತಿಕ್ರಿಯೆ ಹೀಗಿದೆ.

'ಹೈಕೋರ್ಟ್ ತೀರ್ಮಾನವನ್ನು ಗೌರವಿಸುತ್ತೇನೆ. ಪೂರ್ಣ ಪ್ರಮಾಣದ ಆದೇಶ ನೋಡಿದ ಮೇಲೆ ಮತ್ತೆ ಪ್ರತಿ ಕ್ರಿಯಿಸುವೆ. ಎಸಿಬಿ ಸ್ವತಂತ್ರ ತನಿಖಾ ಸಂಸ್ಥೆ. ನಮ್ಮ ರಾಜ್ಯದಲ್ಲಿ ಮಾತ್ರ ಎಸಿಬಿ ಇರಲಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಎಸಿಬಿ ಇದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತೀವ್ರ ವಿರೋಧದ ನಡುವೆಯೂ 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿತ್ತು. ಎಸಿಬಿ ರಚನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್​ಗೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದಿದ್ದವು. ಈ ಪ್ರಕರಣ ಕುರಿತು ತೀರ್ಪು ಪ್ರಕಟಿಸಿದ ಹೈಕೋರ್ಟ್, ಎಸಿಬಿ ರಚನೆಯನ್ನೇ ರದ್ದು ಮಾಡಿದೆ. ಎಲ್ಲ ಎಸಿಬಿ ಪೊಲೀಸ್​ ಠಾಣೆಯನ್ನ ರದ್ದು ಮಾಡಿ, ಲೋಕಾಯುಕ್ತ ಪೊಲೀಸ್​ ಠಾಣೆಗಳ ಮರು ಸ್ಥಾಪನೆಗೆ ಆದೇಶಿಸಿದೆ.