ಮಂಡ್ಯ: ನಿನ್ನೆ(ಸೋಮವಾರ) ರಾತ್ರಿಯಿಂದ ಇಂದು(ಮಂಗಳವಾರ) ಬೆಳಗ್ಗೆವರಗೂ ಹುಚ್ಚು ನಾಯಿಯೊಂದು 40 ಮಂದಿಗೆ ಕಚ್ಚಿದ್ದು, ಕೆ.ಆರ್.ಪೇಟೆ ತಾಲೂಕಿನ ಜನ ಬೆಚ್ಚಿಬಿದ್ದಿದ್ದಾರೆ.
ಕೆ.ಆರ್.ಪೇಟೆಯ ಪಟ್ಟಣ, ಮಾಕವಳ್ಳಿ, ಪುರ ಗೇಟ್, ಕುಂದನಹಳ್ಳಿ, ಹೆಗ್ಗಡಹಳ್ಳಿ, ವಡ್ಡರಹಳ್ಳಿಯಲ್ಲಿ ದಾಳಿ ಮಾಡಿದ ಹುಚ್ಚುನಾಯಿ, ಕಂಡಕಂಡವರ ಮೇಲೆರಗಿ ಕಚ್ಚಿದೆ. ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರನ್ನೂ ಕಚ್ಚಿದೆ.
ಹುಚ್ಚುನಾಯಿ ಕಡಿತಕ್ಕೆ ಒಳಗಾದವರಿಗೆ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಲಾಗಿದೆ. ಹಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಹುಚ್ಚು ನಾಯಿ ದಾಳಿಯ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಹೆಚ್ಚಿನ ಅನಾವುತ ಸಂಭವಿಸುವ ಮುನ್ನ ಹುಚ್ಚುನಾಯಿಯನ್ನ ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.