ಜಿಲ್ಲೆ

ಡಿಕೆಶಿ ಅಣ್ಣಾ, ನೀವೇನ್​ ಯೋಚ್ನೆ ಮಾಡ್ಬೇಡಿ ನಿಮ್ಮ ಪಾದಯಾತ್ರೆ ವ್ಯರ್ಥ ಆಗೋಕ್ಕೆ ಬಿಡಲ್ಲ...

arunakunigal

ಬೆಂಗಳೂರು: ಯಡಿಯೂರಪ್ಪ ಲಾಸ್ಟ್​ ಬೆಂಚ್​ನಲ್ಲಿದ್ರೂ ಹುಲಿನೇ, ಮುಂದಿನ ಬೆಂಚ್​ನಲ್ಲಿದ್ರು ಹುಲೀನೇ. 2008, 2018 ರಲ್ಲಿ ಯಡಿಯೂರಪ್ಪ ಅವರಿಂದಾಗಿಯೇ ಅಧಿಕಾರ ಹಿಡಿದ್ವಿ. ಮುಂದೆಯೂ ಯಡಿಯೂರಪ್ಪ ನೇತೃತ್ವದಲ್ಲೇ ಅಧಿಕಾರಕ್ಕೆ ಬರ್ತೀವಿ... ಡಿಕೆಶಿ ಅಣ್ಣ ಯೋಚನೆ ಮಾಡ್ಬೇಡಿ, ನಿಮ್ಮ ಪಾದಯಾತ್ರೆ ವ್ಯರ್ಥ ಆಗೋಕ್ಕೆ ಬಿಡಲ್ಲ...

ಹೀಗಂತ ಹೇಳಿದ್ದು ಬಿಜೆಪಿಯ ರಾಜೂಗೌಡ. ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್​ ಮೇಲಿನ ಚರ್ಚೆ ವೇಳೆ ಮಾತನಾಡಿದ ರಾಜೂಗೌಡ, ಯಡಿಯೂರಪ್ಪ ನಮ್ಮ ಗುರುಗಳು. ಅವರ ಹೆಸರ ಮೇಲೆ ನಾವು ಅಧಿಕಾರಕ್ಕೆ ಬಂದಿರೋದು. ಡಿಕೆಶಿ ಅಣ್ಣ ನಿಮ್ಮ ಪಾದಯಾತ್ರೆ ವ್ಯರ್ಥ ಆಗೋಕ್ಕೆ ಬಿಡಲ್ಲ. ಈ ಬಜೆಟ್​ನಲ್ಲಿ 1 ಸಾವಿರ ಕೋಟಿ ಕೊಟ್ಟಿದ್ದೀವಿ. ಮುಂದೆ ನಾವೇ ಮತ್ತೆ ಅಧಿಕಾರಕ್ಕೆ ಬರ್ತೀವಿ. ಯಡಿಯೂರಪ್ಪರ ಆರ್ಶೀವಾದದಿಂದ ನಾನೇ ನೀರಾವರಿ ಮಂತ್ರಿ ಆಗಿ ನಿಮ್ಮ ಎಲ್ಲ ಕೆಲಸ ಮಾಡಿಕೊಡ್ತೀನಿ. ಬೆಂಗಳೂರಿಂದ ಉಲ್ಟಾ ಪಾದಯಾತ್ರೆ ಮಾಡಿ ಜನರಿಗೆ ಸರ್ಕಾರ ಅನುದಾನ ಇಟ್ಟಿರೋದನ್ನು ತಿಳಿಸಿ ಅಣ್ಣಾ. ನೀವು ಗೋವಾಕ್ಕೆ ಫ್ಲೈಟ್​ ಹತ್ತಿದಾಗ 18 ಸೀಟ್​ ತೋರಿಸ್ತಿತ್ತು. ಅಲ್ಲಿ ಇಳಿತ್ತಿದ್ದಂಗೆ 12 ಸೀಟಿಗೆ ಬಂತು ಎಂದು ತಮ್ಮದೇ ಶೈಲಿಯಲ್ಲಿ ಕಾಲೆಳೆದರು.