8 ತಿಂಗಳ ಮಗು ಇದ್ದರೂ ಕರಗದ ತಾಯಿ ಮನಸ್ಸು... ಸಾವಿನ ಮನೆಯ ಕದತಟ್ಟಿದ ಪಿಡಿಒ ಪತ್ನಿ

pdo wife sucide
Published on

ಚಾಮರಾಜನಗರ: ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ಪಿಡಿಒ ಆನಂದ್ ಕಾಂಬ್ಳೆ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಆನಂದ್ ಕಾಂಬ್ಳೆ ಜತೆ 3 ವರ್ಷದ ಹಿಂದೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೀರ್ಥ ಗ್ರಾಮದ ದಿವ್ಯಾಗೆ ಮದುವೆ ಆಗಿತ್ತು. ದಂಪತಿ ಕೊಳ್ಳೇಗಾಲದಲ್ಲಿ ವಾಸವಿದ್ದರು. ದಂಪತಿಗೆ 8 ತಿಂಗಳ ಹೆಣ್ಣು ಮಗು ಇದೆ.

ಕೌಟುಂಬಿಕ ಕಲಹಕ್ಕೆ ಬೇಸತ್ತ ದಿವ್ಯಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಕೊಳ್ಳೇಗಾಲ ಪೊಲೀಸ್​ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದ್ದು, ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net