ಜಿಲ್ಲೆ

ಎಗ್​ರೈಸ್- ಗೋಬಿ ಮಂಚೂರಿ ತಿನ್ನಿಸುವ ಆಸೆ ಹುಟ್ಟಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ!

arunakunigal

ಧಾರವಾಡ: ಥೂ ಎಂತೆಂಥಾ ಕಾಮುಕರು ಇರ್ತಾರೆ ನೋಡಿ. ಭಿಕ್ಷೆ ಬೇಡುತ್ತಿದ್ದ ಬಾಲಕಿಗೆ ಎಗ್​ರೈಸ್- ಗೋಬಿ ಮಂಚೂರಿಯನ್ನು ತಿನ್ನಿಸುವ ಆಸೆ ಹುಟ್ಟಿಸಿ ತನ್ನತ್ತ ಕರೆದ ಕಾಮುಕನೊಬ್ಬ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಇಂತಹ ಹೀನ ಕೃತ್ಯ ಧಾರವಾಡ ನಗರದಲ್ಲಿ‌ ಸಂಭವಿಸಿದೆ.

ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಅತ್ಯಾಚಾರ ಆರೋಪಿ. ಧಾರವಾಡ ನಗರದಲ್ಲಿ 13 ವರ್ಷದ ಬಾಲಕಿಯೊಬ್ಬಳು ಭಿಕ್ಷೆ ಬೇಡುತ್ತಿದ್ದಳು. ಈಕೆಯನ್ನ ಕಂಡ ಮಕ್ಕಳ‌ ರಕ್ಷಣಾ ಘಟಕದ ಸದದಸ್ಯರು ಬಾಲಮಂದಿರಕ್ಕೆ ಕರೆದೊಯ್ದು ಕೌನ್ಸೆಲಿಂಗ್ ಮಾಡುವಾಗ ಬಾಲಕಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಬಾಯ್ಬಿಟ್ಟಿದ್ದಳು. ಎಗ್​ರೈಸ್ ಮತ್ತು ಗೋಬಿ ಮಂಚೂರಿ ಕೊಡಿಸುವುದಾಗಿ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡ ಆರೋಪಿಯ ಗುರುತು ಪತ್ತೆ ಹಚ್ಚುವುದಾಗಿಯೂ ಹೇಳಿದ್ದಳು.

ಬಾಲಕಿಯ‌ ಮಾಹಿತಿ ಆಧರಿಸಿ ಮಹಿಳಾ ಘಟಕದ ಅಧಿಕಾರಿ ಕಮಲಾ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.