ಜಿಲ್ಲೆ

ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಹೋಗ್ತಾರಾ? ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಸಿಪಿವೈ

arunakunigal

ರಾಮನಗರ: ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರುತ್ತಾರೆ ಎಂಬ ಗುಸುಗುಸು ಕ್ಷೇತ್ರದಲ್ಲಿ ಶುರುವಾಗಿದೆ. ಈ ಕುರಿತು ಬುಧವಾರ ರಾಮನಗರದಲ್ಲಿ ಸಿ.ಪಿ.ಯೋಗೇಶ್ವರ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನಾನು ಕಾಂಗ್ರೆಸ್​ಗೆ ಹೋಗುತ್ತೇನೆ ಅನ್ನೊದು ನಿರಾಧಾರ. ಕೆಲವರು ಸುಖಾಸುಮ್ಮನೆ ಗೊಂದಲ ಸೃಷ್ಠಿ ಮಾಡ್ತಿದ್ದಾರೆ. ಪಕ್ಷದಲ್ಲಿ ನನ್ನ ಬಗ್ಗೆ ಅಪನಂಬಿಕೆ ಸೃಷ್ಠಿಸಲು ಹೀಗೆ ಮಾಡ್ತಿದ್ದಾರೆ. ನನ್ನ ಮುಂದಿನ ರಾಜಕೀಯ ಜೀವನ ಬಿಜೆಪಿಯಲ್ಲಿ ಮಾತ್ರ ಎಂದು ಯೋಗೇಶ್ವರ್​ ಹೇಳಿದರು.

15ರಿಂದ 20 ಮಂದಿ ಬೇರೆ ಪಕ್ಷದ ಮುಖಂಡರೇ ಬಿಜೆಪಿಗೆ ಸೇರ್ಪಡೆ ಆಗ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬರೋದು ಪಕ್ಕ. ಮಂಡ್ಯದಲ್ಲಿ ನಾಲ್ಕೈದು ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಮುಂಚೂಣಿಯಲ್ಲಿ ಕೆಲಸ ಮಾಡ್ತಿದ್ದಾರೆ. ಯುವ ನಾಯಕರನ್ನ ಬಿಜೆಪಿಗೆ ಕರೆತರುವ ಪ್ರಯತ್ನ ಮಾಡ್ತಿದ್ದೇನೆ ಎಂದು ಯೋಗೇಶ್ವರ್ ಹೇಳಿದರು.

ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಎಲ್ಲ ಸರ್ಕಾರದಲ್ಲೂ ಮಾಜಿ ಸಿಎಂ ಎಂಬ ಟ್ಯಾಗ್ ಇದೆ. ಸಿಎಂ ಆದರೆ ಚನ್ನಪಟ್ಟಣವನ್ನು ಚಿನ್ನದ, ಚೆಂದದ ಪಟ್ಟಣ ಮಾಡುತ್ತೇನೆ ಎಂದಿದ್ದರು. ಪ್ರತಿ ಊರಿನಲ್ಲಿ ಮುಗ್ದ ಜನರಿಗೆ ಮೋಸ ಮಾಡಿದ್ದಾರೆ. ಪಾಸ್​ಬುಕ್ ಝೆರಾಕ್ಸ್ ಪಡೆದು ಸಾಲ ಮನ್ನಾ ಮಾಡುತ್ತೇನೆ ಎಂದು ಮೋಸ ಮಾಡಿದ್ದಾರೆ. ಅವರು ಏನನ್ನೂ ಮಾಡಿಲ್ಲ. ನಮ್ಮ ಸಿಎಂ ಕೂಡ ಎಚ್​ಡಿಕೆಯ ಸ್ನೇಹಿತರು. ಹೀಗಾಗಿ ಫೇವರ್ ಮಾಡುತ್ತಿದ್ದಾರೆ. ನನಗಾಗುತ್ತಿರುವ ತೊಂದರೆಯನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ನಾನು ಬೇರೆ ಕಡೆ ಹೇಳಿಕೊಳ್ಳುತ್ತೇನೆ. ಕುಮಾರಸ್ವಾಮಿ ಅವರದ್ದು ಅಡ್ಜೆಸ್ಟ್ಮೆಂಟ್ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.