ಬೆಂಗಳೂರು: ಕರೊನಾ ಹಿನ್ನೆಲೆ ರಾಜ್ಯಾದಂತ ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಲಕ್ಷಾಂತರ ಮಂದಿ ಗಂಟು ಮೂಟೆ ಸಮೇತ ಬೆಂಗಳೂರು ತೊರೆದು ಸ್ವಗ್ರಾಮದತ್ತ ಹೊರಟಿದ್ದರು. ಏ.27ರ ಆಸುಪಾಸಿನಲ್ಲಿ ಸಾವಿರಾರು ಮಂದಿ ಬಸ್, ರೈಲು, ಆಟೋ, ಕಾರು, ಟ್ರ್ಯಾಕ್ಟರ್, ಟೆಂಪೋ, ಬೈಕ್ಗಳಲ್ಲಿ ಲಗೇಜು ತುಂಬಿಕೊಂಡು ಆತಂಕದಲ್ಲೇ ಊರು ತೊರೆದಿದ್ದರು. ಸದಾ ಜನರಿಂದ ಗಿಜಿಗುಡುತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರು ಸ್ತಬ್ಧಗೊಂಡಂತೆ ಭಾಸವಾಗುತಿತ್ತು. ಇದೀಗ ಇನ್ನು ಕೆಲವೇ ದಿನದಲ್ಲಿ ಅನ್ಲಾಕ್ ಆಗುತ್ತೆ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಸಾವಿರಾರು ಮಂದಿ ಅದೇ ಆತಂಕದಲ್ಲೇ ಬೆಂಗಳೂರಿನತ್ತ ಮತ್ತೆ ಮುಖ ಮಾಡಿದ್ದಾರೆ. ನೆಲಮಂಗಲ ಟೋಲ್ ಬಳಿ ಸೋಮವಾರ ಬೆಳಗ್ಗೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹಲವರು ಬೈಕ್ನಲ್ಲಿ ಗಂಟುಮೂಟೆ ಕಟ್ಟಿಕೊಂಡು ಬರುತ್ತಿದ್ದ ದೃಶ್ಯ ವಿಜಯವಾಣಿ ಫ್ರೋಟೋಗ್ರಾಫರ್ ರಾಘವೇಂದ್ರ ಸಿ. ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.