ಜಿಲ್ಲೆ

ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರಕ್ಕೆ ಸಂಕಷ್ಟಗಳ ಸರಮಾಲೆ ಎದುರಾಗಿದೆ, ನಾವೀಗ ಆರ್ಥಿಕ ಸಂಕಷ್ಟಲ್ಲಿದ್ದೇವೆ...

ಧಾರವಾಡ: ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಇದರಲ್ಲಿ ಮುಚ್ಚುಮರೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಮೊದಲಿಗೆ ಪ್ರವಾಹ ಬಂತು, ಬಳಿಕ ಕರೊನಾ ಬಂತು. ಮತ್ತೆ ಪ್ರವಾಹ ಬಂತು, ಕರೊನಾನೂ ಬಂತು. ಎರಡು ವರ್ಷದ ಅವಧಿಯಲ್ಲಿ ಸರ್ಕಾರಕ್ಕೆ 60 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಪ್ರವಾಹದಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಿಂದಲೂ ನಷ್ಟವಾಗಿದೆ. ಸರ್ಕಾರಕ್ಕೆ ಬರಬೇಕಾದ ನಿಗದಿತ ಆದಾಯವೂ ಬರುತ್ತಿಲ್ಲ. ಹೀಗಾಗಿ ನಾವು ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಅದರಲ್ಲೇನೂ ಮುಚ್ಚುಮರೆ ಇಲ್ಲ ಎಂದು ಕಾರಜೋಳ ಹೇಳಿದರು. ಇದನ್ನೂ ಓದಿರಿ ರಾತ್ರಿ ವರ್ಗಾವಣೆ ಆಗಿತ್ತು, ಬೆಳಗ್ಗೆ ಬದಲಾಯಿತು! ಚಾಮರಾಜನಗರ ಜಿಲ್ಲಾಧಿಕಾರಿ ಮೇಲಿರುವ ಕೃಪಾಕಟಾಕ್ಷ ಯಾರದ್ದು?

ಆರ್ಥಿಕ ಸಂಕಷ್ಟದ ಮಧ್ಯೆಯೂ ಪರಿಸ್ಥಿತಿಯನ್ನ ನಿಭಾಯಿಸಿಕೊಂಡು ಹೊರಟಿದ್ದೇವೆ. ಕರೊನಾ ನಿಯಂತ್ರಣದಲ್ಲಿ ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ. ರಾಜ್ಯಕ್ಕೆ ಬಿಗಿಯಾದ ಲಾಕ್‌ಡೌನ್ ಅಗತ್ಯ ಇದೆ. ನಿತ್ಯ ಸಾಕಷ್ಟು ಸಾವು-ನೋವು ಸಂಭವಿಸುತ್ತಿದೆ. ಕರೊನಾ ಹಳ್ಳಿಗಳಿಗೂ ಸಾಕಷ್ಟು ಹಬ್ಬಿದೆ. ಇದನ್ನೆಲ್ಲ ನೋಡಿದಾಗ ಬಿಗಿಯಾದ ಲಾಕ್‌ಡೌನ್ ಅವಶ್ಯಕತೆ ಇದೆ ಎಂದು ಕಾರಜೋಳ ಹೇಳಿದರು.