ಜಿಲ್ಲೆ

ಹೇ‌ ಸಿದ್ದರಾಮಯ್ಯ, ಹಳ್ಳಿಗಳಲ್ಲಿ ಸಾಯ್ತಿರೋದು ಅಹಿಂದ ವರ್ಗ.. ಸುಮ್ನೆ ಮಾತ್ನಾಡೋದಲ್ಲ, ಈಗ ಬಂದು ಅವರ ಕಷ್ಟ ನೋಡು: ವಿಶ್ವನಾಥ್​

arunakunigal

ಮೈಸೂರು: ಹೇ‌... ಸಿದ್ದರಾಮಯ್ಯ... ಹಳ್ಳಿಗಳಲ್ಲಿ ಸಾಯುತ್ತಿರೋದು ಅಹಿಂದ ವರ್ಗ. ಅಂದರೆ ಬಡ ಜನರು. ಸುಮ್ಮನೆ ಮಾತನಾಡೋದಲ್ಲ. ಈಗ ಬಂದು ಅವರ ಕಷ್ಟ ನೋಡಬೇಕು ಎಂದು ಮಾಜಿ ಸಿದ್ದರಾಮಯ್ಯಗೆ ಎಂಎಲ್​ಸಿ ಎಚ್​.ವಿಶ್ವನಾಥ್​ ಕರೆ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್​, ಕರೊನಾ ಸಂಕಷ್ಟಕ್ಕೆ ಸಿಲುಕಿ ಜಿಲ್ಲೆಯ ಜನ ಅನುಭವಿಸುತ್ತಿರುವ ನೋವನ್ನು ಆಲಿಸಿ. ಸುಮ್ಮನೇ ತಾನು ಅಹಿಂದ ಎಂದು ಹೇಳಿಕೊಂಡರೆ ಏನೂ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.

ಹಳ್ಳಿಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಜನ ನರಳಿ-ನರಳಿ ಸಾಯುತ್ತಿದ್ದಾರೆ. ಈಗಾಗಲೇ ಹಳ್ಳಿಯಲ್ಲಿ ಕರೊನಾ ಹೆಚ್ಚಾಗುತ್ತಿದೆ. ಮೊದಲು ಇಲ್ಲಿನ ಜನರಿಗೆ ಕರೊನಾದಿಂದ ಮುಕ್ತಗೊಳಿಸಿ ಎಂದು ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ವಿಶ್ವನಾಥ್ ಆಗ್ರಹಿಸಿದರು.

ಆಸ್ಪತ್ರೆಗಳ ಅಧೀಕ್ಷಕರು ಸುಮ್ಮನೆ ಕೂತಿದ್ದಾರೆ. ಅವರಿಗೆ ಹಣವಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ. ಮೊದಲು ಅಲ್ಲಿ ಸರಿಯಾದ ವ್ಯವಸ್ಥೆ ಮಾಡಬೇಕಾಗಿದೆ ಎಂದರು.