ಕೋಟದ ಎ.ಪಿ.ಎಂ.ಸಿ ಹರಾಜು ಕಟ್ಟೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು.  
ಜಿಲ್ಲೆ

ವ್ಯಾಪಾರಸ್ಥರ ಅನುಕೂಲಕ್ಕೆ ಯೋಗ್ಯ ವಾತಾವರಣ

Karthika K.S

ಕೋಟ: ಕೋಟದ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಯತ್ತ ದಾಪುಗಾಲು ಇರಿಸಿದೆ. ಇದರ ಒಂದು ಭಾಗವಾದ ಹರಾಜು ಮಾರುಕಟ್ಟೆಯನ್ನು ಇಂದು ವ್ಯಾಪಾರಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದು, ಕೃಷಿಕರಿಗೆ ಯೋಗ್ಯ ರೀತಿಯ ವಾತಾವರಣ ಸೃಷ್ಟಿಸಲಿ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕೋಟದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿರ್ಮಿಸಿದ ಹರಾಜು ಕಟ್ಟೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕೋಟ ಅಮೃತೇಶ್ವರಿ ದೇಗುಲ ಅಧ್ಯಕ್ಷ ಆನಂದ್ ಸಿ.ಕುಂದರ್, ಕಾರ್ಯದರ್ಶಿ ಗಾಯಿತ್ರಿ ರಾವ್, ಎಪಿಎಂಸಿ ನಿಕಟಪೂರ್ವ ಉಪಾಧ್ಯಕ್ಷ ಕೃಷ್ಣ ಪೂಜಾರಿ, ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ, ಕೃಷಿಕ ರವೀಂದ್ರ ಐತಾಳ್, ಪಂಚಾಯಿತಿ ಸದಸ್ಯ ಚಂದ್ರ ಪೂಜಾರಿ, ಸುಧಾ ಎ.ಪೂಜಾರಿ, ತಾಪಂ ಮಾಜಿ ಸದಸ್ಯೆ ಲಲಿತಾ ಪೂಜಾರಿ, ಎಪಿಎಂಸಿ ಸಿಬ್ಬಂದಿ ಸುನಿತಾ, ಜಗನಾಥ್, ಗುತ್ತಿಗೆದಾರ ಸಂತೋಷ್ ಕೋಟ, ನಾಗರಾಜ್ ಗಾಣಿಗ, ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಜೋಗಿ, ಕೋಟ ಪಂಚವರ್ಣ ಯುವಕ ಮಂಡಲ ಉಪಾಧ್ಯಾಕ್ಷ ದಿನೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ಕೋಟ ಪಂಚಾಯಿತಿ ಸದಸ್ಯ ಚಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.