ಬೆಂಗಳೂರು: ಸ್ವಿಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವುದು ಖಚಿತವಾಗಿದ್ದು, ಸದ್ಯಕ್ಕೆ ಸಿದ್ಧಪಡಿಸಿರುವ ಪ್ರವಾಸದ ವೇಳಾಪಟ್ಟಿಗೆ ವರಿಷ್ಠರು ಅಸ್ತು ಎನ್ನುವುದು ಬಾಕಿಯಿದೆ.
ದಾವೋಸ್ ಶೃಂಗಕ್ಕೆ ಕರ್ನಾಟಕ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದ್ದು, ಮೇ 21 ರಂದು ದಾವೋಸ್ ಗೆ ತೆರಳಿ 26ಕ್ಕೆ ಮರಳುವ ಸಿಎಂ ಬೊಮ್ಮಾಯಿ ಪ್ರವಾಸ ವೇಳಾಪಟ್ಟಿಯು ದೆಹಲಿಗೆ ರವಾನೆಯಾಗಿದೆ.
ಬಿಜೆಪಿ ಆಂತರಿಕ ಬೆಳವಣಿಗೆ ಕಾರಣಕ್ಕೆ ಶುಕ್ರವಾರದವರೆಗೂ ಬೊಮ್ಮಾಯಿ ದಾವೋಸ್ ಪ್ರವಾಸ ಅತಂತ್ರವಾಗಿತ್ತು. ಆದರೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ದಾವೋಸ್ ಪ್ರವಾಸಕ್ಕೆ ದೆಹಲಿ ನಾಯಕರು ಒಪ್ಪಿಗೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.