ಜಿಲ್ಲೆ

ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ಇನ್ನು ಚರ್ಚಿಸಿಲ್ಲ ಎಂದ ಸಿಎಂ

arunakunigal

ಬೆಂಗಳೂರು: ಪೆಟ್ರೋಲ್-ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಇಂಧನ ಬೆಲೆಯನ್ನು ತಗ್ಗಿಸುವ ನಿರ್ಧಾರವನ್ನ ಕೇಂದ್ರ ಸರ್ಕಾರ ಪ್ರಕಟಿಸಿ ಒಂದು ವಾರ ಕಳೆದರೂ ಕರ್ನಾಟಕದಲ್ಲಿ ಮಾತ್ರ ದರ ಇಳಿಕೆ ಬಗ್ಗೆ ಇನ್ನೂ ಚರ್ಚೆಯೇ ಆಗಿಲ್ಲ.

ಕೇಂದ್ರ ಅಬಕಾರಿ ಸುಂಕವನ್ನು ಪೆಟ್ರೋಲ್​ ಮೇಲೆ ಲೀಟರ್​ಗೆ 8 ರೂಪಾಯಿ ಮತ್ತು ಡೀಸೆಲ್​ ಮೇಲೆ ಲೀಟರ್​ಗೆ 6 ರೂಪಾಯಿ ಇಳಿಸುವ ಮೂಲಕ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 9.5 ರೂ. ಮತ್ತು ಡೀಸೆಲ್​ ಬೆಲೆಯನ್ನು ಲೀಟರ್​ಗೆ 7 ರೂ. ಇಳಿಕೆ ಮಾಡುವುದಾಗಿ ಮೇ 21ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನ, ಕೇರಳ, ಮಹಾರಾಷ್ಟ್ರ ಸರ್ಕಾರಗಳು ದರ ಇಳಿಕೆ ಮಾಡಿದವು. ಕರ್ನಾಟಕದಲ್ಲೂ ದರ ಇಳಿಕೆ ಆಗುತ್ತೆ ಜನ ಎದುರು ನೋಡುತ್ತಿದ್ದಾರೆ. ಅಂದು ಪೆಟ್ರೋಲ್​-ಡೀಸೆಲ್ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದ ಸಿಎಂ, ಇಂದು(ಮೇ 28) ಕೂಡ ಇದೇ ಮಾತನ್ನ ಪುನರುಚ್ಛರಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.