ಮೂಲ್ಕಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ, ಭಾರತದ ಕ್ರೈಸ್ತ ಚರ್ಚ್‌ಗಳ ಒಕ್ಕೂಟ, ಭಾರತದ ಕಾನೂನು ನೆರವು ಘಟಕ, ಹಳೆಯಂಗಡಿ ವಿಜಯ ಮಾಸ್ಟರ್ ಟ್ರಸ್ಟ್ ಸಹಯೋಗದಲ್ಲಿ ಅಂತರ್ ಕಾಲೇಜು ಹಾಗೂ ಚರ್ಚ್‌ಗಳ ಕ್ರಿಸ್‌ಮಸ್ ಹಾಡುಗಳ ಸ್ಪರ್ಧೆ, ಸೌಹಾರ್ದ ಕೂಟ ಗುರುವಾರ ಬೆಳಗ್ಗೆ ಹಳೆಯಂಗಡಿ ಕುಬಲಗುಡ್ಡೆಯಲ್ಲಿ ನಡೆಯಿತು.
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ರೈಟ್ ಡಾ.ಪೀಟರ್ ಪೌಲ್ ಸಾಲ್ದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಂತಿ, ಸೌಹಾರ್ದ ಮೂಲಕ ವಿಶ್ವ ಶಾಂತಿಯನ್ನು ಪ್ರತಿಪಾದಿಸಿದ ಯೇಸುಕ್ರಿಸ್ತರ ಜನನದ ಹಬ್ಬ ನಮ್ಮಲ್ಲಿ ಶಾಂತಿ, ಸಮಾಧಾನ ನೀಡಲಿ ಎಂದರು.
ಹಿರಿಯ ಸಿವಿಲ್ ನ್ಯಾಯಧೀಶೆ ಶೋಭಾ ಬಿ.ಜಿ. ಕಾನೂನು ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿದರು. ಮಂಗಳೂರು ವಕೀಲರ ಸಂಘ ಅಧ್ಯಕ್ಷ ರಾಘವೇಂದ್ರ ಎಚ್.ವಿ., ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಪಕ್ಷಿಕೆರೆ ಚರ್ಚ್ ಧರ್ಮಗುರು ಅನಿಲ್ ಅಲ್ಫ್ರೆಡ್ ಡಿಸೋಜ, ಮೂಲ್ಕಿ ಚರ್ಚ್ ಧರ್ಮಗುರು ವಂ.ಆಂಟನಿ ಶೇರಾ, ಸಿಎಸ್‌ಐಕೆಎಸ್‌ಡಿಯ ಬಿಷಪ್ ರೈಟ್ ಹೇಮಚಂದ್ರ ಕುಮಾರ್, ಮೂಲ್ಕಿ ಯುನಿಟಿ ಚರ್ಚ್ ಸಭಾಪಾಲಕ ರೆ.ಸ್ಟೀವನ್ ಸರ್ವೋತ್ತಮ, ಉದ್ಯಮಿ ರಾಹುಲ್ ಕರ್ಕಡ ಉಪಸ್ಥಿತರಿದ್ದರು.
ಭಾರತದ ಕ್ರೈಸ್ತ ಚರ್ಚ್ ಒಕ್ಕೂಟ ಅಧ್ಯಕ್ಷ ನೋಟರಿ ಡೇನಿಯಲ್ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಚಿಂತಕ ಶ್ರೀಪತಿ ಭಟ್, ಶಿಮಂತೂರು, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕದಿಕೆ ಕೇಂದ್ರ ಜುಮಾ ಮಸೀದಿ ಧರ್ಮಗುರು ಪಿ.ಎ.ಅಬ್ದುಲ್ಲಾ ಝೈನಿ ಬಡಗನ್ನೂರು, ಹರೇಕಳ ಉಲ್ಲಾಸ್ ನಗರ ಜುಮಾ ಮಸೀದಿ ಧರ್ಮಗುರು ಶರೀಫ್ ಸಖಾಫಿ, ಮೂಲ್ಕಿ ತಾಲೂಕು ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ನ್ಯಾಯಾಂಗ ಇಲಾಖೆ ಶಿರಸ್ತೇದಾರ್ ಪ್ರಕಾಶ್ ನಾಯಕ್, ವಕೀಲರಾದ ಪ್ರತೀಕ್ಷಾ, ಜೀವನ್, ಶಶಿಕುಮಾರ್, ಮೂಲ್ಕಿ ಪೊಲೀಸ್ ಠಾಣೆ ಎಎಸ್‌ಐ ಸುರೇಶ್, ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ಮತ್ತಿತರರು ಉಪಸ್ಥಿತರಿದ್ದರು.
ವಕೀಲರಾದ ಪ್ರಸಾದ್ ಶೆಟ್ಟಿ, ರವೀಶ್ ಕಾಮತ್, ಸುಭಾಷ್ ಚಂದ್ರ ಸಾಗರ್, ಶಿವರಾಜ್, ರಕ್ಷಿತ್ ಕಾನೂನು ಬಗ್ಗೆ ಮಾಹಿತಿ ನೀಡಿದರು. ಸಾಧಕರಿಗೆ ಗೌರವ, ಕ್ರೈಸ್ತ ವಿವಾಹ ಪ್ರಮಾಣ ಪತ್ರ ನೋಂದಣಿ ಶಿಬಿರ, ಒಕ್ಕೂಟ ವತಿಯಿಂದ ಉಚಿತವಾಗಿ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲಾಯಿತು. ಹರಿಣಿ ಸುಶಾಂತಿ ಬಂಗೇರ ಸ್ವಾಗತಿಸಿದರು. ಪ್ರಸನ್ನಿ ವಂದಿಸಿದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು.