ಬೆಂಗಳೂರು: ನಾಗ್ಪುರದಲ್ಲಿ ಸಂಸ್ಕೃತಿಯ ಪಾಠ ಕಲಿತು ಬಂದು, ಇಲ್ಲಿ ಬ್ಲೂ ಫಿಲ್ಮಂ ನೋಡಿದವರು ನೀವು ಎಂದು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಬಿಜೆಪಿಯ ಲಕ್ಷ್ಮಣ್ ಸವದಿಗೆ ಟಾಂಗ್ ನೀಡಿದರು.
ಬಜೆಟ್ ಕುರಿತು ವಿಧಾನಸೌಧದಲ್ಲಿ ಮಂಗಳವಾರ ಚರ್ಚೆ ಮಾಡುತ್ತಿದ್ದ ಮರಿತಿಬ್ಬೇಗೌಡರು, ರೈತರು ಜಿಡಿಪಿಗೆ ಶೇ.14 ಕೊಡುಗೆ ನೀಡುತ್ತಾರೆ. ಬಜೆಟ್ನಲ್ಲಿ ರೈತರಿಗೆ ನೀಡಿರುವುದು ಕೇವಲ ಶೇ.3. ಇದು ರೈತ ವಿರೋಧಿ ಬಜೆಟ್ ಎಂದರು. ಆಗ ಗರಂ ಆದ ಬಿಜೆಪಿ ಸದಸ್ಯ ಎನ್.ರವಿ, ಸುಳ್ಳು ಏಕೆ ಹೇಳುತ್ತೀರಿ? ನಿಜ ಹೇಳಿ ಎಂದರು.
ನಾವಲ್ಲ, ನೀವು ನಾಗ್ಪುರ ತರಬೇತಿ ಕೇಂದ್ರದಿಂದ ಸುಳ್ಳು ಹೇಳುವುದನ್ನೇ ಕಲಿತಿದ್ದೀರಿ ಬಿಡಿ ಎಂದು ಹರಿಪ್ರಸಾದ್ ಹೇಳಿದರು. ಇದಕ್ಕೆ ಧ್ವನಿಗೂಡಿಸಿ ಲಕ್ಷ್ಮಣ್ ಸವದಿ, ಹೌದು. ನಾವು ನಾಗ್ಪುರದಲ್ಲೇ ಕಲಿತು ಬಂದದ್ದು ಏನೀಗಾ? ಎಂದರು. ಈ ವೇಳೆ ಹರಿಪ್ರಸಾದ್, ಹೌದು ಬಿಡಿ ಅಲ್ಲಿ ಕಲಿತು ಬಂದು ಇಲ್ಲಿ ಕುಳಿತು ಬ್ಲೂ ಫಿಲ್ಮಂ ನೀಡಿದ್ದೀರಿ ಎನ್ನುತ್ತಿದ್ದಂತೆ ಲಕ್ಷ್ಮಣ್ ಸವದಿ ಸುಮ್ಮನಾದರು.