ಜಿಲ್ಲೆ

ಆಗಸ್ಟ್​ 15ರೊಳಗೆ ನಿರ್ಧಾರ ಆಗುತ್ತೆ... ಎನ್ನುತ್ತಲೇ ಸಿಎಂ ಬದಲಾವಣೆ ಬಗ್ಗೆ ಮಾಜಿ ಶಾಸಕ ಸುರೇಶ ಗೌಡ ಹೇಳಿದ್ದೇನು?

arunakunigal

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಶೋಭಾ ಕರಂದ್ಲಾಜೆ ಅವರು ಸಿಎಂ ಆಗ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರು ಆದರೂ ನಾನು ಸ್ವಾಗತಿಸುತ್ತೇನೆ. ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್​ ಗೌಡ ಹೇಳಿದ್ದಾರೆ.

ಸಿಎಂ ಬದಲಾವಣೆ ವದಂತಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್​ ಗೌಡ, ಎಂಎಲ್​ಎ ಚುನಾವಣೆ 6 ತಿಂಗಳು ಇರುವಾಗಲೂ, 10 ತಿಂಗಳು ಇರುವಾಗಲೂ ಬಿಜೆಪಿಯವರು ಸಿಎಂ ಅನ್ನು ಬದಲಾವಣೆ ಮಾಡಿದ್ದಾರೆ. 2023ರಲ್ಲಿ ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಮತ್ತು 2024ರಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಿ ಮುಂದುವರಿಯಬೇಕು ಅನ್ನುವ ನಿಟ್ಟಿನಲ್ಲಿ ಹೈಕಮಾಂಡ್​ ಯಾವ ನಿರ್ಧಾರ ತೆಗೆದುಕೊಂಡರು ನಾವು ಬದ್ಧರಾಗಿರುತ್ತೇವೆ. ಆಗಸ್ಟ್​ 15ರೊಳಗೆ ಎಲ್ಲವೂ ನಿರ್ಧಾರ ಆಗುತ್ತೆ ಎಂದರು.