ಜಿಲ್ಲೆ

ದಾವಣಗೆರೆಯಲ್ಲಿ ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

arunakunigal

ದಾವಣಗೆರೆ: ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.

ದೇವರಹೊನ್ನಾಳಿ ಹಾಗೂ ತಕ್ಕನಹಳ್ಳಿ ಗ್ರಾಮಗಳ ನಡುವಿನ ಬಸವಾಪಟ್ಟಣ ಸವಳಂಗ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಕೋಟೆಹಾಳ್ ಗ್ರಾಮದ ಮಹೇಶಪ್ಪ ಮತ್ತು ಸಂಜು ಇಬ್ಬರೂ ಒಂದು ಬೈಕ್​ನಲ್ಲಿ ಬರುತ್ತಿದ್ದರು. ಮತ್ತೊಂದು ಬೈಕ್‌ನಲ್ಲಿ ದಿಡಗೂರು ಪ್ರಶಾಂತ್ ಮತ್ತು ಆನಂದ್​ ಎಂಬುವವರು ಹೋಗುತ್ತಿದ್ದರು. ಮಾರ್ಗಮಧ್ಯೆ ಎರಡು ಬೈಕ್​ಗಳು ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮಹೇಶಪ್ಪ, ಸಂಜು, ಪ್ರಶಾಂತ್​​ ಕೊನೆಯುಸಿರೆಳೆದಿದ್ದಾರೆ. ಆನಂದ್​​ ಸ್ಥಿತಿ ಗಂಭೀರವಾಗಿದೆ.

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆನಂದ್​ರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.