ಜಿಲ್ಲೆ

ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್ ಕಳವು

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಸಮೀಪದ ಬಪ್ಪನಾಡು ದೇವಸ್ಥಾನದ ದ್ವಾರದ ಬಳಿ ಪಾರ್ಕಿಂಗ್ ಮಾಡಿದ್ದ ಬೈಕ್‌ನ್ನು ಕಳವು ಮಾಡಿರುವ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ನಿವಾಸಿ ಕೇಶವ ಶೆಟ್ಟಿಗಾರ್ ಎಂಬುವರು ಹೀರೋ ಗ್ಲ್ಯಾಮರ್ ಬೈಕ್‌ನ್ನು ಎಂದಿನಂತೆ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೂಲ್ಕಿ ಬಪ್ಪನಾಡು ದೇವಸ್ಥಾನದ ದ್ವಾರದ ಬಳಿ ಪಾರ್ಕ್ ಮಾಡಿ ಭದ್ರಪಡಿಸಿ ಮಂಗಳೂರಿಗೆ ಕೆಲಸಕ್ಕೆ ಬಸ್ಸಿನಲ್ಲಿ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ಬಂದು ಬೈಕ್ ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ಬೈಕ್ ಕಳವಾಗಿರುವುದು ಕಂಡು ಬಂದಿದೆ.