ಜಿಲ್ಲೆ

ಬೆಳಗಿನ ಜಾವ ಕೆಲಸಕ್ಕೆ ಹೊರಟ್ಟಿದ್ದ ದಾವಣಗೆರೆ ಜಿಲ್ಲೆಯ ಯುವಕರಿಬ್ಬರು ಮಾರ್ಗಮಧ್ಯೆ ದುರಂತ ಸಾವು

ಶಿವಮೊಗ್ಗ: ನ್ಯಾಮತಿ ತಾಲೂಕಿನ ಸವಳಂಗ- ಶಿವಮೊಗ್ಗ ರಸ್ತೆಯ ಅಬ್ಬಲಗೆರೆ ಬಳಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ರಾಮ್​ಕುಮಾರ್(22) ಮತ್ತು ಕೆಂಚಿಕೊಪ್ಪದ ಮಲ್ಲಿಕಾರ್ಜುನ(30) ಮೃತರು. ಇವರಿಬ್ಬರು ಅಬ್ಬಲಗೆರೆ ಸಮೀಪದ ಐಪಿಎಲ್ ಕಾರ್ಖಾನೆಗೆ ಕೆಲಸಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದವರು. ಈ ವೇಳೆ ಮಳೆ ಸುರಿಯುತ್ತಿದ್ದ ಪರಿಣಾಮ ಸವಾರನ ನಿಯಂತ್ರಣ ತಪ್ಪಿದ ಬೈಕ್​, ಲಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.