ಜಿಲ್ಲೆ

ಭಾರತ್​ ಬಂದ್​ಗೆ ಎಮ್ಮೆ-ಕತ್ತೆಗಳನ್ನ ಕರೆತಂದು ಪ್ರತಿಭಟನೆ

arunakunigal

ಬೆಂಗಳೂರು: ಕೇಂದ್ರದ ಕೃಷಿ ಕಾನೂನು ವಿರೋಧಿಸಿ ರಾಷ್ಟ್ರೀಯ ಸಂಯುಕ್ತ ಕಿಸಾನ್​ ಮೋರ್ಚಾವು ಕರೆ ನೀಡಿದ್ದ ಭಾರತ್​ ಬಂದ್​ಗೆ ರಾಜ್ಯಾದ್ಯಂತ ರೈತ ಸಂಘಗಳು ಬೆಂಬಲ ಸೂಚಿಸಿದ್ದು, ಕೆಲವೆಡೆ ಕತ್ತೆ ಮತ್ತು ಎಮ್ಮೆಗಳನ್ನೂ ಕರೆತಂದು ಪ್ರತಿಭಟನಾನಿರತರು ಗಮನ ಸೆಳೆದರು.

ಧಾರವಾಡದ ಜ್ಯುಬಿಲಿ ಸರ್ಕಲ್‌ಗೆ ಎಮ್ಮೆಗಳ ಸಮೇತ ಬಂದ ಜಯ ಕರ್ನಾಟಕ ಸಂಘಟನೆಯು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದರು. ಬೆಳಗ್ಗೆಯೇ ಜ್ಯುಬಿಲಿ ಸರ್ಕಲ್‌ ಅನ್ನು ಬಂದ್​ ಮಾಡಿ ವಿವಿಧ ಸಂಘಟನೆಗಳು ಪ್ರತಿಭಟನಾ ಸಭೆ ನಡೆಸಿದವು.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕತ್ತೆಗಳನ್ನು ಮೆರವಣಿಗೆ ಮಾಡಿಕೊಂಡು ಬಂದ ರೈತ ಸಂಘದ ಮುಖಂಡರು ಪ್ರಧಾನಿಯನ್ನು ಕತ್ತೆಗೆ ಹೋಲಿಸಿ ಪ್ರತಿಭಟನೆ ನಡೆಸಿದರು.