ಬೆಂಗಳೂರು: ಆಂಟಿ ಎಂದು ಕರೆದಿರುವುದಕ್ಕೆ ಆಕ್ರೋಶಗೊಂಡ ಮಹಿಳೆಯೊಬ್ಬಳು ಎಟಿಎಂ ಭದ್ರತಾ ಸಿಬ್ಬಂದಿಯಾಗಿರುವ ವೃದ್ಧನ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಡೆದಿದ್ದೇನು?: ಕಳೆದ ಸೆಪ್ಟೆಂಬರ್ 19 ರಂದು ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ಘಟಕಕ್ಕೆ ಹಣ ತುಂಬಲು ಅಧಿಕಾರಿಗಳು ಬಂದಿದ್ದರು. ಈ ವೇಳೆ ಅಡ್ಡ ನಿಂತಿದ್ದ ಮಹಿಳೆಗೆ " ಆಂಟಿ ಸೈಡಿಗೆ ಬನ್ನಿ" ಎಂದು 64 ವರ್ಷದ ಸೆಕ್ಯುರಿಟಿ ಗಾರ್ಡ್ ಕೃಷ್ಣಯ್ಯ ಹೇಳಿದ್ದಾರೆ. ಆಂಟಿ ಎಂದಿದ್ದಕ್ಕೆ ಸಿಟ್ಟಾದ ಮಹಿಳೆ ನನ್ನೆ ಆಂಟಿ ಅಂತೀಯಾ ಎಂದು ಸೆಕ್ಯುರಿಟಿ ಗಾರ್ಡ್ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು ದಾಂಧಲೆ ಎಬ್ಬಿಸಿದ್ದಾಳೆ. ಒಂದು ವಾರದ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
" ಆಂಟಿ ಸೈಡಿಗೆ ಬನ್ನಿ" ಎಂದಿದ್ದಕ್ಕೆ ಅಶ್ವಿನಿ ಎಂಬ ಮಹಿಳೆಯೊಬ್ಬಳು, ನನ್ನೆ ಆಂಟಿ ಅಂತೀಯಾ ಎಂದು ಸದ್ಯ ಹಲ್ಲೆಗೊಳಗಾದ ಎಟಿಎಂ ಭದ್ರತಾ ಸಿಬ್ಬಂದಿ ಆಗಿರುವ ನನ್ನ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದಿದ್ದಾಳೆ ಎಂದು ಕೃಷ್ಣಯ್ಯ ಬೆಂಗಳೂರಿನ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಅಶ್ವಿನಿ ಎಂಬ ಮಹಿಳೆ ವಿರುದ್ದ IPC 506.504.324.355 ರ ಅಡಿ ಕೇಸ್ ದಾಖಲಾಗಿದೆ.