ಜಿಲ್ಲೆ

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 22 ವರ್ಷದ ಯುವತಿಗೆ ಗೆಲುವು

ಬಳ್ಳಾರಿ: ಏ.27ರಂದು ರಾಜ್ಯದ ಹಲವು ನಗರಸಭೆ ಮತ್ತು ಪುರಸಭೆಗಳಿಗೆ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ನಡೆದಿದ್ದು, ಈ ಬಾರಿ ಬಳ್ಳಾರಿ ಮಹಾನಗರ ಪಾಲಿಕೆಗೆ 22ರ ವಯಸ್ಸಿನ ಯುವತಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾಳೆ.

ಕಳೆದ ಬಾರಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೃತೀಯ ಲಿಂಗಿಯೊಬ್ಬರು ಗೆಲುವ ಸಾಧಿಸುವ ಮೂಲಕ ಗಮನ ಸೆಳೆದಿದ್ದರು. ಈ ಬಾರಿ 4ನೇ ವಾರ್ಡ್​ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 22 ವರ್ಷದ ಯುವತಿ ತ್ರಿವೇಣಿ ಗೆಲುವಿನ ನಗೆ ಬೀರಿದ್ದಾರೆ.

ಅತಿ ಕಿರಿಯ ವಯಸ್ಸಿನಲ್ಲೇ ಮೊದಲ ಬಾರಿಗೆ ಬಳ್ಳಾರಿ ಮಹಾನಗರ ಪಾಲಿಕೆ ಪ್ರವೇಶಿಸಿದ ತ್ರಿವೇಣಿ, ನಿರೀಕ್ಷೆಯಂತೆ ಮತದಾರರು ನನನ್ನು ಗೆಲ್ಲಿಸಿದ್ದಾರೆ. ಅಭೂತ ಪೂರ್ವ ಕೆಲಸಗಳನ್ನು ಮಾಡಿ ಮತದಾರರ ಖುಣ ತೀರಿಸುವೆ. ರಾಜಕೀಯ ಪ್ರವೇಶಿದ ಮೊದಲ ಬಾರಿಗೆ ಆಯ್ಕೆ ಆಗಿದ್ದು ಖುಷಿಯಾಗುತ್ತಿದೆ ಎಂದಿದ್ದಾರೆ.