

ತಿರುವನಂತಪುರಂ: ಮಹಾಮಾರಿ ಕರೊನಾಗೆ ಇಡೀ ಜಗತ್ತು ತಲ್ಲಣಿಸಿದೆ. ದೇಶದಲ್ಲಿ ನಿತ್ಯ ಸಾವಿರಾರು ಮಂದಿ ಕೋವಿಡ್ಗೆ ಬಲಿಯಾಗುತ್ತಿದ್ದಾರೆ. ಸಾವಿನ ಸರಣಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಕೋಟ್ಯಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಕರೊನಾ ವಾರಿಯರ್ಸ್ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೋಂಕು ಮಣಿಸುವ ಹೋರಾಟದಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಆದರೂ ಬಹುತೇಕ ಜನರು ಮಾಸ್ಕ್ ಧರಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
ಇಂತಹ ಜನರಿಗೆ ಅರಿವು ಮೂಡಿಸಲೆಂದೇ ಕೇರಳ ಪೊಲೀಸರು ಡಾನ್ಸ್ ಮಾಡಿದ್ದಾರೆ. ಒಂದೂವರೆ ನಿಮಿಷ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣಿದಲ್ಲಿ ಸಖತ್ ವೈರಲ್ ಆಗಿದೆ.
ಈ ಡಾನ್ಸ್ ವಿಡಿಯೋವನ್ನು ಕೇರಳದ ರಾಜ್ಯ ಪೊಲೀಸ್ ಮಾಧ್ಯಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಎಲ್ಲರೂ ಕರೊನಾ ವಿರುದ್ಧ ಹೋರಾಟ ಮಾಡೋಣ. ನಿಮ್ಮೊಂದಿಗೆ ಕೇರಳ ಪೊಲೀಸ್ ಇದೆ ಎಂದು ಬರೆದುಕೊಂಡಿದೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಪೊಲೀಸರ ವಿನೂತನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.