ಜಿಲ್ಲೆ

ಯಲ್ಲಮ್ಮ ತಾಯಿ, ನನ್ನ ಮಗಳಿಗೆ ನಮಗಿಂತ 100 ಪಟ್ಟು ಶ್ರೀಮಂತ ವರನ ಕರುಣಿಸು... ನನ್ಗೆ PSI ಕೆಲ್ಸ ಕೊಡ್ಸಮ್ಮ...

arunakunigal

ಉಗರಗೋಳ: ‘ತಾಯಿ ನನ್ನ ಮಗಳಿಗೆ ನಮಗಿಂತ 100 ಪಟ್ಟು ಹೆಚ್ಚು ಆಸ್ತಿ ಇರುವ ಯುವಕನೊಂದಿಗೆ ಮದ್ವೆ ಮಾಡಿಸು', 'ದೇವರೇ ನನಗೆ ಪಿಎಸ್‌ಐ ಹುದ್ದೆ ಕರುಣಿಸು', 'ಅಮ್ಮ ನನ್ನ ಬಳಿ ಸಾಲ ಪಡೆದವರು ವಾಪಸ್​ ಮಾಡ್ತಿಲ್ಲ. ದಯವಿಟ್ಟು ದಯೆ ತೋರಮ್ಮ... ನಿನ್ನ ದಯೆಯಿಂದ ಹಣ ಮರಳಿಸುವಂತೆ ಮಾಡು', 'ತಾಯಿ ನಾನು ಇಷ್ಟಪಟ್ಟವ ಜತೆಗೇ ನನ್ನ ಮದ್ವೆ ಮಾಡಿಸು’...

ಇದು ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ದೇವರಿಗೆ ಭಕ್ತರು ಬರೆದ ತರೇಹವಾರಿ ಕೋರಿಕೆಯ ಪತ್ರಗಳು. ನಾಲ್ಕು ದಿನಗಳಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆಯುತ್ತಿದ್ದು, ಭಕ್ತರು ಹಣದ ಜತೆಗೆ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪತ್ರಗಳನ್ನು ಬರೆದು ಹುಂಡಿಗೆ ಹಾಕಿದ್ದಾರೆ. ಆಸೆ ಈಡೇರಿಸಿದರೆ ಹರಕೆ ತೀರಿಸುವುದಾಗಿಯೂ ತಿಳಿಸಿದ್ದಾರೆ. ಹೆಚ್ಚಿನವರು ತಮ್ಮ ಮಗ ಅಥವಾ ಮಗಳಿಗೆ ಉತ್ತಮ ವಧು-ವರ ಕರುಣಿಸುವಂತೆ ಸವದತ್ತಿ ಯಲ್ಲಮ್ಮ ದೇವಿಯಲ್ಲಿ ಕೇಳಿಕೊಂಡಿದ್ದಾರೆ.

1.30 ಕೋಟಿ ರೂ. ಸಂಗ್ರಹ: ನಾಲ್ಕು ದಿನ ನಡೆದ ಎಣಿಕೆಯಲ್ಲಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 1.30 ಕೋಟಿ ರೂ. ಸಂಗ್ರಹವಾಗಿದೆ. ಮುಂದಿನ ವಾರ ಇನ್ನೂ ಎರಡು ದಿನಗಳ ಕಾಲ ಹುಂಡಿ ಹಣ ಎಣಿಕೆ ಕಾರ್ಯ ನಡಿಯಲಿದೆ ಎಂದು ದೇವಸ್ಥಾನ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.