ಬೆಳಗಾವಿ: ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು, ಎಂಇಎಸ್ ಹೀನಾಯ ಸೋಲು ಕಂಡಿದೆ. 50 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ.
ಪಾಲಿಕೆಯ 58 ವಾಡ್೯ಗಳಲ್ಲಿ 54 ಸ್ಥಾನಕ್ಕೆ ಬಿಜೆಪಿ ಸ್ಪರ್ಧಿಸಿದೆ. ಈ ಪೈಕಿ ಒಟ್ಟು 36 ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಪಾಲಿಕೆಯಲ್ಲಿ ಅಧಿಕಾರಕ್ಕೇರಲು ಒಟ್ಟು 31 ಸ್ಥಾನ ಗೆಲಲ್ಲಬೇಕಿದೆ. ಆದರೆ, ಬಿಜೆಪಿ ಇನ್ನೂ 5 ಸ್ಥಾನವನ್ನ ಹೆಚ್ಚು ಗೆದ್ದು ಇತಿಹಾಸ ನಿರ್ಮಿಸಿದೆ. ಐವತ್ತು ವರ್ಷದಿಂದ ಮರಾಠಿಗರೇ ಅಧಿಕಾರ ನಡೆಸಿಕೊಂಡು ಬರುತ್ತಿದ್ದರು. ಇದೇ ಮೊದಲ ಬಾರಿಗೆ ಪಾಲಿಕೆ ಗಾದಿ ಬಿಜೆಪಿ ಪಾಲಾಗಿದೆ.
ಸೆ.3ರಂದು ಬೆಳಗಾವಿ ಪಾಲಿಕೆ ಚುನಾವಣೆಯ ಮತದಾನ ನಡೆದಿತ್ತು. 58 ವಾರ್ಡ್ಗಳಲ್ಲಿ 385 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇಂದು ಬೆಳಗ್ಗೆ 8 ಆರಂಭವಾದ ಮತ ಎಣಿಕೆ ಕಾರ್ಯ ಮಧ್ಯಾಹ್ನ 12ರ ವೇಳೆಗೆ ಸಂಪೂರ್ಣ ಮುಕ್ತಾಯಗೊಂಡಿದೆ. 58 ವಾರ್ಡ್ಗಳ ಪೈಕಿ 36 ವಾರ್ಡ್ಗಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಪಾಲಿಗೆ ಗಾದಿಯಲ್ಲಿ ಕಮಲ ಅರಲಿದೆ. ಜೆಡಿಎಸ್ ಒಂದೇ ಒಂದು ಖಾತೆಯನ್ನೂ ತೆರೆದಿಲ್ಲ.
ಒಟ್ಟು ವಾರ್ಡ್ 58- ಪಕ್ಷವಾರು ಗೆದ್ದ ಸ್ಥಾನಗಳು
ಬಿಜೆಪಿ- 36
ಪಕ್ಷೇತರ- 10
ಕಾಂಗ್ರೆಸ್- 9
ಎಂಇಎಸ್-2
ಎಂಐಎಂಐಎಂ- 1
ಆಮ್ ಆದ್ಮಿ-0
ಜೆಡಿಎಸ್-0