ಜಿಲ್ಲೆ

ಬಸವಕಲ್ಯಾಣ ಕ್ಷೇತ್ರದ ಮತ ಎಣಿಕೆ: 4ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

arunakunigal

ಬೀದರ್​: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಬೀದರ್​ನ ಬಿವಿಬಿ ಕಾಲೇಜಿನಲ್ಲಿ ನಡೆಯುತ್ತಿದೆ. ಇಂದು(ಭಾನುವಾರ) ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದ್ದು, ಮೊದಲ ಮೂರು ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಸವಕಲ್ಯಾಣದಲ್ಲಿ ಶೇ.61.49 ಮತದಾನವಾಗಿತ್ತು.

ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ. ಬಿ.ನಾರಾಯಣರಾವ್​ರ​ ಪತ್ನಿ ಮಾಲಾ(ಮಲ್ಲಮ್ಮ), ಬಿಜೆಪಿಯಿಂದ ಶರಣು ಸಲಗಾರ​ ಅಖಾಡಕ್ಕೆ ಧುಮುಕಿದ್ದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಜೆಡಿಎಸ್​ನಿಂದ ಸೈಯದ್​ ಅಲಿ ಖಾದ್ರಿ ಸ್ಪರ್ಧಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ನೇರಹಣಾಹಣಿ ಇದೆ.

ಮೊದಲನೇ ಸುತ್ತು
ಬಿಜೆಪಿ- 4215 ಮತ
ಕಾಂಗ್ರೆಸ್- 1576 ಮತ
ಜೆಡಿಎಸ್- 254
ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 290
ಬಿಜೆಪಿಗೆ 2639 ಮಗತಳ ಮುನ್ನಡೆ

ಎರಡನೇ ಸುತ್ತು
ಬಿಜೆಪಿ- 6440 ಮತ
ಕಾಂಗ್ರೆಸ್​ 3188 ಮತ
ಜೆಡಿಎಸ್​-549
ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 618
ಬಿಜೆಪಿಗೆ 3252 ಮತಗಳ ಮುನ್ನಡೆ

ಮೂರನೇ ಸುತ್ತು
ಬಿಜೆಪಿ- 9282
ಕಾಂಗ್ರೆಸ್- 4848
ಜೆಡಿಎಸ್- 808
ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 1038
ಬಿಜೆಪಿಗೆ 5034 ಮತಗಳ ಮುನ್ನಡೆ

ನಾಲ್ಕನೇ ಸುತ್ತು‌
ಬಿಜೆಪಿ- 12023
ಕಾಂಗ್ರೆಸ್- 6291
ಜೆಡಿಎಸ್- 1047
ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 1491
ಬಿಜೆಪಿಗೆ 5732 ಮತಗಳ ಮುನ್ನಡೆ