ಕೊಪ್ಪಳ: ಅಪಘಾತದಲ್ಲಿ ನರಳುತ್ತಿದ್ದ ತಾಯಿಯನ್ನು ಬಿಟ್ಟು ಹೋಗದ ಕೋತಿ ಮರಿಯು ನರಳಾಡುವ ಘಟನೆ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ನಡೆದಿದೆ.
ವಾಹನಕ್ಕೆ ಸಿಲುಕಿದ ತಾಯಿ ಕೋತಿ ಗಂಭೀರವಾಗಿ ಗಾಯವಾಗಿತ್ತು.ಗಾಯಗೊಂಡರೂ ತಾಯಿಯನ್ನು ಬಿಟ್ಟು ಹೋಗದ ಮರಿ ಕೋತಿ ಕೆಲ ಕಾಲ ನರಳಾಡಿದೆ. ಈ ದೃಶ್ಯ ಎಲ್ಲರ ಮನಕಲುಕಿದೆ.
ತಾಯಿ ಕೋತಿಯ ಸ್ಥಿತಿ ಕಂಡು ಕಣ್ಣೀರು ಹಾಕಿದ ಮರಿ ಕಣ್ಣೀರು ಹಾಕಿದೆ. ನಂತರ ಗಾಯಗೊಂಡ ಕೋತಿಯನ್ನು ಸ್ಥಳೀಯರು ಹಾರೈಕೆ ಮಾಡಿದ್ದಾರೆ.ನಂತರ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿ ಕೋತಿಯನ್ನು ರಕ್ಷಿಸಿದ್ದಾರೆ.