More

    ರಾಮಾಯಣದ ಸ್ಥಳಗಳಿಗೆ ನೀವೊಮ್ಮೆ ಸುತ್ತಿಬನ್ನಿ, 18 ದಿನಗಳಲ್ಲಿ ಎಂಟು ಸಾವಿರ ಕಿ.ಮೀ ಸಂಚರಿಸಲಿದೆ ಈ ರೈಲು!

    ನವದೆಹಲಿ: ಹಿಂದೂ ಧರ್ಮದ ಆರಾಧ್ಯ ದೈವ ಶ್ರೀ ರಾಮಚಂದ್ರ ಹಾಗೂ ರಾಮಾಯಣವನ್ನು ನೆನಪಿಸುವ ಶ್ರೀ ರಾಮಾಯಣ ದರ್ಶನಂ (ಭಾರತ್​ ಗೌರವ್​​ ಟೂರಿಸ್ಟ್​​ ಟ್ರೈನ್​) ರೈಲು ಸಂಚಾರ ಆರಂಭಿಸಿದೆ.

    ಇದು ದೇಶಾದ್ಯಂತ 18 ದಿನಗಳ ಕಾಲ 8 ಸಾವಿರ ಕಿಮೀ ಸಂಚಾರ ನಡೆಸಲಿದೆ. ದಿಲ್ಲಿಯಿಂದ ಆರಂಭವಾಗಿ ಶ್ರೀ ರಾಮಜನ್ಮಭೂಮಿ ಅಯೋಧ್ಯ, ಜನಕಾಪುರ (ನೇಪಾಳ), ವಾರಾಣಸಿ, ನಾಸಿಕ್​, ರಾಮೇಶ್ವರಂಗಳಲ್ಲಿ ಸಂಚರಿಸಲಿದೆ.

    ಕೊನೆಯದಾಗಿ ರಾಮೇಶ್ವರಂಗೆ ತಲುಪಿ ಮತ್ತೆ ದೆಹಲಿಗೆ ಹಿಂತಿರುಗಲಿದೆ. ಈ ರೈಲು ದೆಹಲಿಯಿಂದ ಮೊದಲು ತಲುಪುವ ಸ್ಥಳವೇ ಅಯೋಧ್ಯೆ, ಅಲ್ಲಿಂದ ಹನುಮಾನ್​ ಟೆಂಪಲ್​, ಭಾರತ್​​ ಮಂದಿರ, ನಂದಿಗ್ರಾಮ, ಬಕ್ಸರ್​​ ಸೇರಿದಂತೆ ಗಂಗಾ ನದಿ ದಡದಲ್ಲಿರುವ ವಾರಾಣಸಿ ಸೇರಿದಂತೆ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಿಗೂ ತಲುಪಲಿದೆ.

    ಇನ್ನೂ ಸೀತಾಮಾತೆಯ ತವರೂರು ನೇಪಾಳಕ್ಕೂ ಈ ರೈಲು ಭೇಟಿ ನೀಡಲಿದೆ. ಜನಕಾಪುರಕ್ಕೆ ತಲುಪಿ ಅಲ್ಲಿಂದ ಮತ್ತೆ ಪ್ರಯಾಗ್​, ಚಿತ್ರಕೂಟ್​​ಗೆ ತೆರಳಿ ಅಲ್ಲಿಂದ ದಕ್ಷಿಣ ಭಾರತದತ್ತ ಮುಖ ಮಾಡಲಿದೆ.

    ಮೊದಲಿಗೆ ಮಹಾರಾಷ್ಟ್ರದ ನಾಸಿಕ್​, ನಂತರ ತ್ರಯಂಬಕೇಶ್ವರ, ಪಂಚವಟಿ ಇದಾದ ಬಳಿಕ ಕರ್ನಾಟಕದ ಹಂಪಿಗೂ ಬರಲಿದೆ. ಇಲ್ಲಿ ಆಂಜನೇಯ ಜನ್ಮಭೂಮಿ ಕಿಷ್ಕಿಂದೆಗೆ ತಲುಪಿದ ಬಳಿಕ ಸೀದಾ ರಾಮೇಶ್ವರಂನ ದನುಷ್ಕೋಟಿಗೆ ತಲುಪಲಿದೆ. ಹೀಗೆ ರಾಮಾಯಣದಲ್ಲಿ ಉಲ್ಲೇಖವಾಗಿರುವ ಶ್ರೀರಾಮಚಂದ್ರ ನಡೆದಾಡಿದ ಪೌರಾಣಿಕ ಸ್ಥಳಗಳಿಗೆ ಈ ರೈಲು ಭೇಟಿ ನೀಡಲಿದೆ. (ಏಜೆನ್ಸೀಸ್​)

    ಬಿಜೆಪಿಗೆ ಇಬ್ಬರು ಕಾಂಗ್ರೆಸ್​​ನ ಪ್ರಭಾವಿ ನಾಯಕರ ಸೇರ್ಪಡೆ ಬಗ್ಗೆ ಶಾಸಕ ಬಸನಗೌಡ ಯತ್ನಾಳ್​ ಹೇಳಿಕೆ: ಕಮಲ ಹಿಡಿಯುವ ಆ ನಾಯಕರು ಯಾರು?

    ವಿದೇಶಕ್ಕೆ ಏಕಾಂಗಿ ಪ್ರವಾಸ ಕೈಗೊಂಡಿದ್ದವನು ನಾಪತ್ತೆ; ನನ್ನ ತಮ್ಮನನ್ನು ಹುಡುಕಿಕೊಡಿ ಎಂದು ಜಾಲತಾಣದಲ್ಲಿ ಸಹೋದರನ ಅಳಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts