More

    ಪ್ರವಾಸಕ್ಕೆಂದು ಬಂದಿದ್ದ ಜಪಾನ್ ಮೂಲದ ಮಹಿಳೆ ಗೋಕರ್ಣದಲ್ಲಿ ನಾಪತ್ತೆ..!

    ಕಾರವಾರ: ಪ್ರವಾಸಕ್ಕೆಂದು ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ ನಡೆದಿದೆ.

    ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಮಹಿಳೆ. ಫೆಬ್ರವರಿ 05 ರಂದು ಮಹಿಳೆ ತನ್ನ ಪತಿಯೊಂದಿಗೆ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್‌ನಲ್ಲಿ ತಂಗಿದ್ದರು. ಮರುದಿನ ಮುಂಜಾನೆ 10:30ರ ಸುಮಾರಿಗೆ ನೇಚರ್ ಕ್ಯಾಂಪಸ್‌ನಿಂದ ಹೊರಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ.

    ಪೊಲೀಸರ ಪ್ರಕಾರ, ಗೋಕರ್ಣದ ಬಳಿಯ ಬಂಗ್ಲೆಗುಡ್ಡದ ಕಾಟೇಜ್‌ನಲ್ಲಿ ಮಹಿಳೆ ತನ್ನ ಗಂಡನ ಜತೆಗೆ ತಂಗಿದ್ದರು.

    ಫೆಬ್ರವರಿ 5 ರಂದು ಬೆಳಿಗ್ಗೆ 10.15 ಕ್ಕೆ, ಅವಳು ತನ್ನ ಪತಿಗೆ ಶೀಘ್ರದಲ್ಲೇ ಹಿಂತಿರುಗುವುದಾಗಿ ಹೇಳಿ ತಾವು ವಾಸಿಸುತ್ತಿದ್ದ ರೂಂನಿಂದ ಹೊರ ಬಂದಿದ್ದಾಳೆ. ಆದರೆ 24 ಗಂಟೆ ಕಳೆದರೂ ಆಕೆ ವಾಪಸ್​​ ಆಗಿಲ್ಲ. ಪತ್ನಿ ಹಿಂದಿರುಗದನ್ನ ಕಂಡು ಆಕೆಯ ಪತಿ ಡೈ ಯಮಜಾಕಿ ಅವಳನ್ನು ಸಂಪರ್ಕಿಸಲು ಆಕೆಗೆ ಕರೆ ಮಾಡಿದ್ದಾರೆ. ಆದರೆ ಸಂಪರ್ಕ ಸಾಧ್ಯವಾಗಿಲ್ಲ.

    ಆಕೆಯ ಪತಿ ಡೈ ಯಮಜಾಕಿ, ಆಕೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಫೆಬ್ರವರಿ 6ರಂದು ಗೋಕರ್ಣ ಪೊಲೀಸರನ್ನು ಸಂಪರ್ಕಿಸಿದ್ದಾರೆ.

    ಗೋಕರ್ಣದ ಪೊಲೀಸರು ಆಕೆಯನ್ನು ಪತ್ತೆ ಹಚ್ಚಲು ಕ್ರಮಕೈಗೊಂಡರೂ ಅದು ಫಲಕಾರಿಯಾಗಿಲ್ಲ. ಕರ್ನಾಟಕ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಜಪಾನ್ ರಾಯಭಾರ ಕಚೇರಿಗೆ ಸದ್ದಿ ತಲುಪಿಸಲಾಗಿದೆ.

    ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಇದು ಗಂಡ ಮತ್ತು ಹೆಂಡತಿ ನಡುವಿನ ಜಗಳ ಅನ್ನಿಸುತ್ತಿದೆ ಯಾಕಂದ್ರೆ ಎಮಿ ಕೊನೆಯ ಬಾರಿ ಆತನ ಗಂಟನಿಗೆ ಇ-ಮೇಲ್ ಹಾಕಿದ್ದಾಳೆ. ನನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಬೇಡಿ ಎಂದು ಅದರಲ್ಲಿ ಜಪಾನ್​ ಭಾಷೆಯಲ್ಲಿ ಬರೆಯಲಾಗಿದೆ.

    ಸದ್ಯ ಆಕೆ ಕೇರಳದಲ್ಲಿರಬಹುದು ಎಂಬ ಮಾಹಿತಿಯನ್ನ ಪೊಲೀಸರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts