ಜಿಲ್ಲೆ

ರಾಜಕೀಯಕ್ಕೆ ವಯಸ್ಸು ಮುಖ್ಯವಲ್ಲ! ಸಿಎಂ ಭೇಟಿ ಬಳಿಕ ಮಾರ್ಮಿಕವಾಗಿ ನುಡಿದ ದೇವೇಗೌಡ

arunakunigal

ಬೆಂಗಳೂರು: ರಾಜಕಾರಣದಲ್ಲಿ ವಯಸ್ಸು ಮುಖ್ಯವಲ್ಲ. ಜನರ ಕೆಲಸ ಮಾಡಲು ಉತ್ಸಾಹ ಮುಖ್ಯ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮಾರ್ಮಿಕವಾಗಿ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ದೇವೇಗೌಡ, ನಾವು ಮಹಾಭಾರತದಲ್ಲಿನ ಘಟನೆ ನೆನಪಿಸಿಕೊಳ್ಳಬೇಕು. ಭೀಷ್ಮನಿಗೆ ವಯಸ್ಸು ಆದ್ರೂ ಹತ್ತು ದಿನ ಯುದ್ಧ ಮಾಡಿದ. ಕರ್ಣ ಒಂದೂವರೆ ದಿನ ಯುದ್ಧ ಮಾಡಿದ. ರಾಜಕಾರಣಕ್ಕೆ ವಯಸ್ಸು ಮುಖ್ಯ ಅಲ್ಲ, ಜನರ ಕೆಲಸ ಮಾಡಲು ಉತ್ಸಾಹ ಮುಖ್ಯ ಎಂದರು. ವಯಸ್ಸು ಇದೆ ಎಂದು ಮನೆಯಲ್ಲಿ ಮಲಗಿಕೊಂಡ್ರೆ ಪ್ರಯೋಜನವೇನು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನನ್ನು ನನ್ನ ಶಿಷ್ಯ ಎಂದು ಹೇಳಲ್ಲ. ಅವರು ನಾಯಕರಾಗಿ ಬೆಳೆದಿದ್ದಾರೆ ಎಂದ ದೇವೇಗೌಡ, ನೀರಿನ ವಿಚಾರದಲ್ಲಿ ಜೆಡಿಎಸ್ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ. ಈ ವಿಚಾರದಲ್ಲಿ ಭೇದಭಾವ ಇಲ್ಲ ಎಂದರು.

ಸಂಸತ್​ ಗೌರವ ಇತ್ತಿಚೆಗೆ ಕಡಿಮೆ ಆಗ್ತಿದೆ. ಕೂಗಾಡಿ ಸದನ ಮುಂದೂಡುವುದು ಸರಿಯಲ್ಲ. ಅಲ್ಲಿ ನಾನು ಯಾರಿಗೂ ಬುದ್ಧಿ ಹೇಳುವ ಸ್ಥಾನದಲ್ಲಿ ಇಲ್ಲ. ವ್ಯವಸ್ಥೆ ಹಾಳಾಗಿದೆ. ಎರಡೂ ಕಡೆ ದೋಷವಿದೆ. ಹಠ ಬಿಡಬೇಕು, ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಂಸತ್ ನಡೆಯದಂತೆ ಮಾಡುವುದು ಸರಿಯಲ್ಲ ಎಂದರು.