ಜಿಲ್ಲೆ

ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ: ಪೊಲೀಸ್​ ಪೇದೆ ಸಾವು

arunakunigal

ಕೆಜಿಎಫ್​: ತುಮಕೂರು ಹೊರವಲಯದ ಕ್ಯಾತ್ಸಂದ್ರ ಸಮೀಪ ಕೆಎಸ್​ಆರ್​ಟಿಸಿ ಬಸ್​ ಬೈಕ್​ಗೆ ಡಿಕ್ಕಿ ಹೊಡೆದು ಕೆಜಿಎಫ್​ ಪೊಲೀಸ್​ ಜಿಲ್ಲೆಯ ನಾಗರಿಕ ಪೊಲೀಸ್​ ಪೇದೆ ಎಸ್​.ಆರ್​.ಬಾಲಕೃಷ್ಣ (27) ಮೃತಪಟ್ಟಿದ್ದಾರೆ.

ನಗರದ ಉರಿಗಾಂ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಕೃಷ್ಣ ಭಾನುವಾರ ಸ್ವಂತ ಊರಾದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಶಕಗಡಕ್ಕೆ ಹೋಗಿದ್ದರು. ಸೋಮವಾರ ಕರ್ತವ್ಯಕ್ಕೆ ಹಾಜರಾಗಲು ಕೆಜಿಎಫ್​ಗೆ ಬರುತ್ತಿದ್ದಾಗ ಸಾರಿಗೆ ಬಸ್​ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕ್ಯಾತ್ಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಬಾಲಕೃಷ್ಣ ಅಂತ್ಯಸಂಸ್ಕಾರವನ್ನು ಸ್ವಗ್ರಾಮ ಶಕಗಡದಲ್ಲಿ ಪೊಲೀಸ್​ ಇಲಾಖೆ ಗೌರವಗಳೊಂದಿಗೆ ನೆರವೇರಿಸಲಾಯಿತು. ಉರಿಗಾಂ ಸಿಪಿಐ ವೆಂಕಟರಾಮಪ್ಪ ಹಾಗೂ ನೂರಾರು ಪೊಲೀಸರು ಅಂತಿಮ ದರ್ಶನ ಪಡೆದರು.