ಜಿಲ್ಲೆ

SSLC ಪರೀಕ್ಷಾ ಕೇಂದ್ರದಲ್ಲಿ ಸಿಕ್ಕಿಬಿದ್ದ 6 ನಕಲಿ ವಿದ್ಯಾರ್ಥಿಗಳು

ಚಿಕ್ಕೋಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭದ ಮೊದಲ ದಿನವೇ 6 ಮಂದಿ ನಕಲಿ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದ ಈ 6 ಮಂದಿ, ಬೇರೆ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯುತ್ತಿದ್ದರು. ಹಾಲ್ ಟಿಕೆಟ್ ಪರಿಶೀಲನೆ ವೇಳೆ ಎಕ್ಸಾಂಗೆ ಹಾಜರಾಗಿರುವುದು ಅಸಲಿಯಲ್ಲ, ನಕಲಿ ವಿದ್ಯಾರ್ಥಿಗಳು ಎಂದು ಗೊತ್ತಾಗಿದೆ. ಎಕ್ಸ್​ಟ್ರನಲ್ಸ್​ ಪರಿಕ್ಸಾರ್ಥಿಗಳ ಪರವಾಗಿ ಇವರೆಲ್ಲರೂ ಬಂದಿದ್ದರು.

ರಾಹುಲ್ ಕಿಳ್ಳಿಕೇತರ, ಭಿಮಶಿ ಹುಲಿಕುಂದ, ಕಾರ್ತಿಕ್ ಲಚ್ಚಪ್ಪ ಜಿಕುಂಬಾರ್, ಸಿದ್ದು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ, ಸವಿತಾ ಮಾದೇವ ಹೊಸೂರು ಬಂಧಿತರು. ಚಿಕ್ಕೋಡಿ ಪೊಲೀಸರು ನಕಲಿ ವಿದ್ಯಾರ್ಥಿಗಳ ವಿಚಾರಣೆ ಮುಂದುವರಿಸಿದ್ದಾರೆ.