ಬಳ್ಳಾರಿ: ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಹಕ್ಕಿಜ್ವರ (Bird Flu) ಪತ್ತೆಯಾದ ಬೆನ್ನಲ್ಲೇ ಕೆಲವೆಡೆ ಕೋಳಿಗಳ ಮಾರಣಹೋಮ ಮಾಡಲಾಯಿತು. ಹಕ್ಕಿ ಜ್ವರದ ಭೀತಿಯಿಂದ ಜನರು ಕೋಳಿ ಮಾಂಸ ತಿನ್ನುವುದನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಸದ್ಯ ಈ ಗಾಳಿ ರಾಜ್ಯಕ್ಕೂ ಬೀಸಿದ್ದು, ಹಲವೆಡೆ ಕೋಳಿಯಿಂದ ಸೋಂಕು ತಗಲುವ ಭಯ ಜನರನ್ನು ತೀವ್ರವಾಗಿ ಕಾಡುತ್ತಿದೆ.
ಇದನ್ನೂ ಓದಿ: ನಿಯಮಿತವಾಗಿ ಕಾಫಿ ಕುಡಿಯೋದ್ರಿಂದ ಲಿವರ್ ಕಾಯಿಲೆಗಳು ಗುಣವಾಗುತ್ತದೆಯೇ!; ಹೊಸ ಸಂಶೋಧನೆ ವರದಿ ಹೇಳಿದ್ದೇನು? | Liver Diseases
ತಾಲೂಕಿನ ಕಪ್ಪಗಲ್ ಗ್ರಾಮದಲ್ಲಿ 8000 ಕೋಳಿಗಳು ದಿಢೀರ್ ಸಾವನ್ನಪ್ಪಿದ್ದು, ಸತ್ತ ಕೋಳಿಗಳ ಮಾದರಿಯನ್ನು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಗ್ರಾಮದ ರವಿ ಎಂಬುವವರ ಫಾರಂನಲ್ಲಿ ಕೋಳಿಗಳು ಮೃತಪಟ್ಟಿವೆ ಎಂದು ವರದಿಯಾಗಿದೆ.
ಹಕ್ಕಿಜ್ವರ ತಗುಲಿದೆ ಎಂಬ ಶಂಕೆ ಹಿನ್ನೆಲೆ ಪ್ರಯೋಗಾಲಯಕ್ಕೆ ಮಾದರಿ ರವಾನಿಸಲಾಗಿದೆ. ಮಧ್ಯಪ್ರದೇಶದ ಭೋಪಾಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟಿ ಆನಿಮಲ್ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲು ಕಳುಹಿಸಿಕೊಡಲಾಗಿದೆ. ಸೋಮವಾರ (ಮಾ.03) ವರದಿ ಬರಲಿದೆ ಎಂದ ಅಧಿಕಾರಿಗಳು ತಿಳಿಸಿದ್ದಾರೆ. ಫಾರಂ ಸುತ್ತಲೂ ಒಂದು ಕಿಮೀ ವ್ಯಾಪ್ತಿ ಸೋಂಕು ಪೀಡಿತ ಘೋಷಣೆ ಹೊರಡಿಸಲಾಗಿದೆ.