ಜಿಲ್ಲೆ

ಚುನಾವಣಾ ಅಕ್ರಮ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ 65 ಲಕ್ಷ ರೂ. ವಶಕ್ಕೆ

Webdesk - Manjunatha B

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಮಧ್ಯೆ ಚುನಾವಣಾ ಅಕ್ರಮಕ್ಕೂ ರಾಜ್ಯದ ಹೆಸರು ಕೇಳಿ ಬರುತ್ತಿದೆ.

ರಾಜ್ಯ ವಿವಿಧೆಡೆ ಹಾಗೂ ಗಡಿ ಭಾಗಗಳಲ್ಲಿ ಅಧಿಕಾರಿಗಳು ಎಷ್ಟೇ ಕಟ್ಟೆಚ್ಚರ ವಹಿಸಿದರು ಸಹ ಅಕ್ರಮವಾಗಿ ಹಣ, ವಸ್ತುಗಳು ಸಾಗಿಸುವುದು ಕಂಡು ಬರುತ್ತದೆ.

ಬಸ್ಸಿನಲ್ಲಿ ಸಾಗಾಟ

ಇನ್ನು ಗಡಿ ಜಿಲ್ಲೆ ಬೆಳಗಾವಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ವಾಹನದಲ್ಲಿ ದಾಖಲೆ ಇಲ್ಲದೆ 65 ಲಕ್ಷ ರೂಪಾಯಿ ಸಾಗಿಸುತ್ತಿರುವುದು ಕಂಡು ಬಂದಿದ್ದು ಚುನಾವಣಾ ಅಧಿಕಾರಿಗಳು ಹಣ ಹಾಗೂ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ಧಾರೆ.

ಜಿಲ್ಲೆಯ ಗೋಕಾಕ್​ ತಾಲ್ಲೂಕಿನ ಪರಾನಟ್ಟಿ ಚಕ್ ಪೋಸ್ಟ್ ಬಳಿ ಬೆಳಗಾವಿ ಔರಾದ್​ ಬಸ್​ ಅನ್ನು ಅಧಿಕಾರಿಗಳು ಪರಿಶೀಲನೆ ಮಾಡಿದಾಗ ದಾಖಲೆ ಇಲ್ಲದೆ ಹಣ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.