More

    ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಮಿತ್​ ಷಾ ವಿಶ್ವಾಸ

    ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ಕಾಂಗ್ರೆಸ್​ ವಿರುದ್ಧ ಗುಡುಗಿದ್ದು ಎಟಿಎಂಗಾಗಿ ಹುಡುಕಾಟ ನಡೆಸಿದೆ ಎಂದು ಟೀಕಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಅಮಿತ್​ ಷಾ ಪೂರ್ಣ ಬಹುಮತದೊಂದಿದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಜನತೆ ತಕ್ಕ ಪಾಠ ಕಲಿಸುತ್ತಾರೆ

    ಇಂದು ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯವಾಗಿದೆ ನಾಳೆಯಿಂದ ನಿಜವಾದ ಚುನಾವಣಾ ಅಖಾಡ ಆರಂಭವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಬಹುಮತದಿಂದ ಗೆಲುವು ಸಾಧಿಸಲಿದೆ ನವ ಕರ್ನಾಟಕ ಧ್ಯೇಯದೊಂದಿಗೆ ಬಿಜೆಪಿ ಚುನಾವಣೆಯಲ್ಲಿ ಜಯ ಗಳಿಸಲಿದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಅವರದ್ದು ರಿವರ್ಸ್ ಗೇರ್ ಜನತೆ ಅವರಿಗೆ ತಕ್ಕ ಪಾಠ ಕಲಿಸ್ತಾರ. ಡಬಲ್ ಎಂಜಿನ್ ಸರ್ಕಾರ ಏನಂತ ಈಗಾಗಲೇ ಗೊತ್ತಾಗಿದೆ. ಕಾಂಗ್ರೆಸ್ ಪಿಎಫ್ಐಗೆ ವಿಶೇಷ ಟ್ರೀಟ್ ಮೆಂಟ್ ಕೊಟ್ಟಿತ್ತು ನಾವು ಇದಕ್ಕೆ ಲಗಾಮು ಹಾಕಿದ್ದೇವೆ.

    ಮತ ಬ್ಯಾಂಕ್ ರಾಜಕಾರಣ

    ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿತ್ತು ಅದನ್ನು ನಮ್ಮ ಸರ್ಕಾರ ರದ್ದು ಮಾಡಿ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದೆ. ಧರ್ಮಾಧಾರಿತ ಮೀಸಲಾತಿ ಸಾಂವಿಧಾನಿಕವಲ್ಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮೀಸಲಾತಿ ನೀಡಿತ್ತು.

    ಕಾಂಗ್ರೆಸ್ ಕಿತ್ತೂರು ಕರ್ನಾಟಕಕ್ಕೆ ಅಪಮಾನ ಮಾಡೋ ಕೆಲಸ ಮಾಡಿತು ಮಹಾದಾಯಿ ಹೋರಾಟಕ್ಕೆ ಕಾಂಗ್ರೆಸ್ ನ್ಯಾಯ ನೀಡಲಿಲ್ಲ. ಆದರೆ, ನಮ್ಮ ಬಿಜೆಪಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಕೃಷ್ಣಾ ಮೇಲ್ದಂಡೆ, ತುಂಗಾ ಮೇಲ್ದಂಡೆ ಯೋಜನೆಗಳಿಗೂ ಆದ್ಯತೆ ನೀಡಿದ್ದೇವೆ.

    Amit Shah (1)

    ಇದನ್ನೂ ಓದಿ: VIDEO| ನೇಮಕಾತಿ ಹಗರಣ; ಪೊಲೀಸರ ಕಪಾಳಕ್ಕೆ ಬಾರಿಸಿದ YSRCP ನಾಯಕಿ

    ಕೆರೂರು ಲಿಫ್ಟ್, ಧಾರವಾಡ – ಬೆಳಗಾವಿ ರೈಲ್ವೆ ಯೋಜನೆಗೂ ಶೀಘ್ರವೇ ಚಾಲನೆ ದೊರೆಯಲಿದೆ. 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡುವ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ಧೇವೆ. ಸೋನಿಯಾ, ಮನಮೋಹನಸಿಂಗ್ ಅಧಿಕಾರದಲ್ಲಿದ್ದಾಗ ಸಾವಿರ ಕೋಟಿ ಲೆಕ್ಕದಲ್ಲಿ ಹಣ ಕೊಡಲಾಗುತ್ತಿತ್ತು. ಆದರೆ, ಅವರು ಕೊಟ್ಟ ಹಣಕ್ಕಿಂತ 2.40 ಲಕ್ಷ ಕೋಟಿ ಗ್ರ್ಯಾಂಟ್ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

    ಯಾರ ಮೀಸಲಾತಿ ಕಡಿತ ಮಾಡುತ್ತೆ

    ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿದೆ. ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ತರುತ್ತೇವೆ ಅಂತ ಕಾಂಗ್ರೆಸ್ ಹೇಳ್ತಿದೆ. ಯಾರ ಮೀಸಲಾತಿ ಕಡಿತ ಮಾಡುತ್ತೆ ಎಂದು ಕಾಂಗ್ರೆಸ್ ಹೇಳಲಿ ಎಂದು ಅಮಿತ್​ ಷಾ ಪ್ರಶ್ನಿಸಿದ್ದಾರೆ.

    ಇನ್ನು ಕಾಂಗ್ರೆಸ್​​ನಿಂದ ಲಿಂಗಾಯತರಿಗೆ ಅನ್ಯಾಯ ಕುರಿತು ಪ್ರತಿಕ್ರಿಯಿಸಿ ಒಂದು ಜಾಗದಲ್ಲಿಯೂ ಲಿಂಗಾಯಿತರನ್ನು ತೆಗೆದು ಬೇರೆಯವರಿಗೆ ಕೊಟ್ಟಿಲ್ಲ. ಕಾಂಗ್ರೆಸ್​​ನವರು ಲಿಂಗಾಯಿತರಗೆ ಪದೇ ಪದೇ ಅಪಮಾನ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

    ಶೆಟ್ಟರ್​ಗೆ ಕಾರಣ ಹೇಳಿದ್ದೇವೆ

    ಇನ್ನು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಕಾಂಗ್ರೆಸ್​ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ ನಾವು ಟಿಕೆಟ್​ ನೀಡುವ ವಿಚಾರವಾಗಿ ಅವರಿಗೆ ಕಾರಣ ಹೇಳಿದ್ದೇವೆ ಅದನ್ನು ನಾವು ಬಹಿರಂಗಪಡಿಸಲ್ಲ. ಮತದಾರರಿಗೆ ಯಾವ ರೀತಿ ಹೇಳಬೇಕೊ ಆ ರೀತಿ ಮುಟ್ಟಿಸ್ತೇವೆ ಲೋಕಸಭೆ ಚುನಾವಣೆಯಲ್ಲಿ ಸ್ಟ್ಯಾಟರ್ಜಿ ಬದಲಾಗುತ್ತೆವಿಧಾನಸಭೆಗೂ, ಲೋಕಸಭೆಗೆ ವ್ಯತ್ಯಾಸವಿದೆ.

    ಜಗದೀಶ್ ಶೆಟ್ಟರ್ ಸ್ವಯಂ ಚುನಾವಣೆಯಲ್ಲಿ‌ ಸೋಲ್ತಾರೆ ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಶೆಟ್ಟರ್ ಒಬ್ಬರಿಗೆ ಟಿಕೆಟ್ ತಪ್ಪಿಸಿಲ್ಲ ಹಲವು ಹಿರಿಯ ನಾಯಕರಿಗೂ ಟಿಕೆಟ್​ ತಪ್ಪಿದೆ. ನಾವು ಅವರಿಗೆ ಕಾರಣವನ್ನು ಸಹ ಹೇಳಿದ್ದೇವೆ.

    ಶೆಟ್ಟರ್​ ಸಿಎಂ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಯಾರ ಮುಷ್ಟಿಯಲ್ಲಿತ್ತು. ಯಾರ ಮುಷ್ಟಿಯಲ್ಲಿಯೂ ಇಲ್ಲ ಹಿಂದಿನಿಂದ ಹೇಗಿದೆಯೋ ಹಾಗೆಯೇ ಇದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts