ಕವಿತಾಳ: ರೈತರ ಬಹುವರ್ಷಗಳ ಬೇಡಿಕೆಯಾದ 5ಎ ನಾಲೆಯ ಸರ್ವೇ ಕಾರ್ಯ ವಟಗಲ್‌ನಲ್ಲಿ ಸೋಮವಾರ ನಡೆಯಿತು.
ಇದನ್ನೂ ಓದಿ: ಪೂರ್ಣಯ್ಯ ನಾಲೆ ಉಳಿವಿಗೆ ಯುವಜನರ ನಡಿಗೆ
ನೀರಾವರಿ ಹೋರಾಟಗಾರ ಬಸವರಾಜ ಬುಂಕಲದೊಡ್ಡಿ ಮಾತನಾಡಿ, ವಟಗಲ್, ಅಮೀನಗಡ, ಪಾಮನಕಲ್ಲೂರು, ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯಲ್ಲಿ 10 ವರ್ಷದಿಂದ ನೀರಾವರಿಗಾಗಿ ಹೋರಾಟ ಮಾಡಲಾಗುತ್ತಿದೆ. ಶಾಸಕ ಬಸನಗೌಡ ತುರ್ವಿಹಾಳ ಅವರ ಶ್ರಮದಿಂದ ಈ ಭಾಗಕ್ಕೆ ನೀರಾವರಿಯಾಗುತ್ತಿದೆ ಎಂದರು.
ಸರ್ವೇ ಕಾರ್ಯವನ್ನು ಖಾಸಗಿ ಕಂಪನಿಯಿಂದ ಮಾಡಲಾಗುತ್ತಿದೆ. ಕಳೆದ ವಾರದಿಂದ 5ಎ ನೀರಾವರಿ ವ್ಯಾಪ್ತಿ ಪ್ರದೇಶಗಳಲ್ಲಿ ಸರ್ವೇಯನ್ನು ನಡೆಸಲಾಗುತ್ತಿದೆ ಎಂದು ಸಿಬ್ಬಂದಿ ರಮೇಶ ತಿಳಿಸಿದರು. ಇದೇ ಸಂದರ್ಭದಲ್ಲಿ ವಟಗಲ್‌ನಲ್ಲಿ ನೀರಾವರಿ ವ್ಯಾಪ್ತಿಯ ಭೂಮಿಯನ್ನು ಸರ್ವೇ ಮಾಡುವ ಸಿಬ್ಬಂದಿಗಳಿಗೆ ರೈತರು ಅಭಿನಂದಿಸಿದರು. ಪ್ರಮುಖರಾದ ಕುಶಪ್ಪ ಚಕೋಟಿ, ಅಜ್ಮೀರ್, ಶಮ್, ಹೇಮಣ್ಣ, ಶಾಂತಕುಮಾರ ಅಂಕುಶದೊಡ್ಡಿ, ಸಿದ್ದಣ್ಣ, ಹನುಮಂತಪ್ಪ ಇತರರಿದ್ದರು.