ಸಿಂಧನೂರಿನ ತಹಸೀಲ್ದಾರ್ ಅರುಣ್ ದೇಸಾಯಿಗೆ ಬೆಳೆ ಸಮೀಕ್ಷೆ ಮಾಡುವ ಪಿಆರ್‌ಗಳು ಸೋಮವಾರ ಮನವಿ ಸಲ್ಲಿಸಿದರು. ಗುರುಬಸವ ಗೊಬ್ಬರಕಲ್, ನಾಗರಾಜ ತೆಕ್ಕಲಕೋಟೆ, ಅಂಬಣ್ಣ ಕೆಂಗಲ್, ಬಸವರಾಜ ಹೊಸಪೇಟೆ, ಭೋಜಪ್ಪ ದೇವರಮನಿ ಇದ್ದರು. 
ಜಿಲ್ಲೆ

50 ರೂ.ಗೆ ಶುಲ್ಕ ಹೆಚ್ಚಳ ಮಾಡಿ

Kopala - Desk - Eraveni

ಸಿಂಧನೂರು: ಗುರುತಿನ ಚೀಟಿ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಅರುಣ್ ದೇಸಾಯಿಗೆ ಬೆಳೆ ಸಮೀಕ್ಷೆ ಮಾಡುವ ಪಿಆರ್‌ಗಳು ಸೋಮವಾರ ಮನವಿ ಸಲ್ಲಿಸಿದರು.

ಹಿಸ್ಸಾ ಪ್ರಕಾರ ಬೆಳೆ ಸಮೀಕ್ಷೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಒಂದು ಪ್ಲಾಟಿಗೆ 10 ರೂ. ಶುಲ್ಕ ಇದ್ದು ಅದನ್ನು 50 ರೂ.ಗೆ ಹೆಚ್ಚಳ ಮಾಡಬೇಕು. ಸರ್ವೇಗಾಗಿ ತೆರಳಿದಾಗ ವಿಷಕೀಟಗಳಿಂದ ರಕ್ಷಿಸಿಕೊಳ್ಳಲು ಕಿಟ್ ನೀಡಬೇಕು. ಹಿಂಗಾರು ಸಮೀಕ್ಷೆಗೂ ಮೊದಲೇ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಲಾಯಿತು.