ಜಿಲ್ಲೆ

ಸಂಘಟಿತ, ಸ್ವಾವಲಂಬಿ ಬದುಕಿಗೆ ಸಹಾಯಹಸ್ತ : ಶಾಸಕ ಉಮಾನಾಥ ಎ.ಕೋಟ್ಯಾನ್ ಅಭಿಮತ

ಮೂಲ್ಕಿ: ಗ್ರಾಮೀಣ ವಲಯದಲ್ಲಿ ಯುವ ಜನತೆ ಸಂಘಟಿತರಾಗಿ ಸ್ವಾವಲಂಬಿಯಾಗಿ ಬೆಳೆಯುವ ಜತೆಗೆ ಸಮಾಜದ ಅಭಿವೃದ್ಧಿಗೆ ಉತ್ತಮ ಸಹಾಯಹಸ್ತ ನೀಡಬೇಕು ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.

ಚಿತ್ರಾಪು ಯುವಕ-ಯುವತಿ- ಮಹಿಳಾ ಮಂಡಲದ 47ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಭಾರತ್ ಬ್ಯಾಂಕ್ ನಿರ್ದೇಶಕ ನಿರಂಜನ್ ಲಕ್ಷ್ಮಣ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಯಾನ್ಸರ್ ಚಿಕಿತ್ಸೆಗಾಗಿ, ಸವಿತಾ ಪೂಜಾರಿ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು.

ಸಂಸ್ಥೆಯ ಹಿರಿಯ ಸದಸ್ಯ ಪುರುಷೋತ್ತಮ್ ಕೆ.ಪಿ., ಉದ್ಯಮಿ ವಾಸು ಪೂಜಾರಿ ಚಿತ್ರಾಪು, ಕರಾಟೆಪಟು ಆಯುಷ್ ಸತೀಶ್ ಸುವರ್ಣ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೂಲ್ಕಿ ತಾಲೂಕುಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಾರ್ಗವಿ ಮಯ್ಯ ಯು.ಎನ್., ಯಶ್ವಿತ್ ಡಿ.ಕಾಂಚನ್ ಅವರನ್ನು ಗೌರವಿಸಲಾಯಿತು.

ಶಾಲಾ ಮಕ್ಕಳ, ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಬಹುಮಾನ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮೂಲ್ಕಿ ನ.ಪಂ. ಸದಸ್ಯೆ ರಾಧಿಕಾ ಯಾಧವ ಕೋಟ್ಯಾನ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಶಾಂತಿ ಪೈ ಟಿ., ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಸವಿತಾ ಉಪಸ್ಥಿತರಿದ್ದರು.

ಸಂಸ್ಥೆ ಅಧ್ಯಕ್ಷ ತುಷಾರ್ ಕರ್ಕೇರ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಂದೀಪ್ ಸುವರ್ಣ ವರದಿ ಮಂಡಿಸಿದರು. ಸಾವಿತ್ರಿ ಪಿ.ಭಟ್ ಮತ್ತು ಪ್ರಕಾಶ್ ಸಪಳಿಗ ನಿರೂಪಿಸಿದರು. ವಿನುತಾ ಶ್ರೀಯನ್ ವಂದಿಸಿದರು.