ಜಿಲ್ಲೆ

ಯುವ ಸಂಸ್ಥೆಯಿಂದ ಸಮಾಜಮುಖಿ ಕಾರ್ಯ : ಇಸ್ಮಾಯಿಲ್ ದಾರಿಮಿ ಶ್ಲಾಘನೆ

ಮೂಲ್ಕಿ: ಯುವ ಸಂಸ್ಥೆಯು ಜನಪರ ಕಾರ್ಯಕ್ರಮಗಳ ಮೂಲಕ ಮೂಲ್ಕಿಯ ಬಡವರ್ಗದ ಜನರಿಗೆ ಸಹಾಯ ನೀಡುವುದು ಅಭಿನಂದನೀಯ. ಈ ಒಗ್ಗಟ್ಟು ಸಾರ್ವತ್ರಿಕವಾಗಿ ಬೆಳೆಯಬೇಕು ಎಂದು ಖತೀಬಾ ಇಸ್ಮಾಯಿಲ್ ದಾರಿಮಿ ಹೇಳಿದರು.

ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್‌ನ 22ನೇ ವಾರ್ಷಿಕೋತ್ಸವ ಪ್ರಯುಕ್ತ ಆಧ್ಯಾತ್ಮಿಕ ಮಜ್ಲಿಸ್ ನೂರೇ ಅಜ್ಮೀರ್ ಹಾಗೂ ಸಹೋದರಿಯರ ಮದುವೆಗೆ ಧನಸಹಾಯ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಪ್ರಭಾಷಣಕಾರರಾದ ಜಲಾಲುದ್ದೀನ್ ತಂಙಳ್ ಕುನ್ನುಂಗೈ ಮಾತನಾಡಿದರು. ಮೂಲ್ಕಿ ಶಾಫಿ ಜುಮಾ ಮಸೀದಿಯ ಗೌರವಾಧ್ಯಕ್ಷ ಸುಹೈಲ್ ಹೈದರ್ ಅಧ್ಯಕ್ಷತೆ ವಹಿಸಿದ್ದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಉಸ್ಮಾನಲ್ ಫೈಝಿ, ಉಸ್ತಾದ್ ವಲಿಯುದ್ದಿನ್ ಫೈಝಿ ವಾಝಕ್ಕಾಡ್, ಮೂಲ್ಕಿ ಶಾಫಿ ಜುಮಾ ಮಸೀದಿ ಗೌರವಾಧ್ಯಕ್ಷ ಇನಾಯತ್ ಆಲಿ, ಮೂಲ್ಕಿ ನ.ಪಂ. ಸದಸ್ಯ ಪುತ್ತುಬಾವ, ಯೂತ್ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಮಂಗಳೂರು ಉತ್ತರ ಯುವ ಕಾಂಗ್ರೆಸ್‌ನ ಉಮ್ಮರ್ ಫಾರೂಕ್, ಉದ್ಯಮಿಗಳಾದ ಲತೀಫ್, ರಿಜ್ವಾನ್, ಇಕ್ಬಾಲ್ ಅಹ್ಮದ್, ಸಮಾಜಸೇವಕ ಎಚ್.ಕೆ.ಅಶ್ರಫ್ ಕೋಡಿ, ಅಬ್ದುಲ್ ಹಮೀದ್ ಅಶ್ಕಾಫ್, ಎಚ್.ಕೆ.ಪರ್ವೀಝ್, ಸುರತ್ಕಲ್ ಚೊಕ್ಕಬೆಟ್ಟು ಎಸ್.ವೈ ಎಸ್.ರೇಂಜ್‌ನ ಮೊಹಮ್ಮದ್, ವಹಾಬ್, ಅಂಗರಗುಡ್ಡೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ನಿಸಾರ್ ಅಹಮದ್, ಕಲ್ನಾಡ್ ಶಾಫಿ ಜುಮಾ ಮಸೀದಿ ಅಧ್ಯಕ್ಷ ಬಶೀರ್ ಅಹ್ಮದ್, ಕಿಲ್ಪಾಡಿ ಹನಫಿ ಮಸೀದಿ ಅಧ್ಯಕ್ಷ ಮಹಮ್ಮದ್ ಅಬ್ದುಲ್ಲಾ, ಅಬ್ದುಲ್ ರಜಾಕ್ ಕರೀಂ, ಉದ್ಯಮಿ ಎ.ಎಚ್.ರಫೀಕ್, ಕೆರೆಕಾಡು ಸಾದಾತ್ ಮಾದಾರಿ ಫೌಂಡೇಶನ್ ಸಂಸ್ಥಾಪಕ ಮೊಹಮ್ಮದ್, ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲ್ಫಾಸ್ ಕಾರ್ನಾಡ್, ಜತೆ ಕಾರ್ಯದರ್ಶಿ, ಉಸೈನ್ ಕೇರಿ, ಉಪಾಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿ ನಾಸೀರ್, ಸದರ್ ಉಸ್ತಾದ್ ಖಲೀಲ್ ದಾರಿಮಿ, ಅಬ್ದುಲ್ ರಜಾಕ್ ಮದನಿ ಗೇರುಕಟ್ಟೆ, ಮಸಾಕಿನ್ ಅಧ್ಯಕ್ಷ ಅಮನುಲ್ಲಾ, ಹಿಮಾಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ರಿಯಾಜ್ ಉಪಸ್ಥಿತರಿದ್ದರು. ಇರ್ಷಾದ್ ಸ್ವಾಗತಿಸಿದರು. ನೌಫಲ್ ಕೆ.ಬಿ.ಎಸ್. ನಿರೂಪಿಸಿದರು.