ಜಿಲ್ಲೆ

ಕುಡಿದ ಮತ್ತಿನಲ್ಲಿ ಕ್ಯಾಂಟರ್​ ಚಲಾಯಿಸಿ ಇಬ್ಬರ ಪ್ರಾಣ ತೆಗೆದ ಚಾಲಕ

Webdesk - Manjunatha B

ಆನೇಕಲ್​: ಕುಡಿದ ಮತ್ತಿನಲ್ಲಿ ಕ್ಯಾಂಟರ್​ ಚಾಲನೆ ಚಾಲನೆ ಮಾಡಿದ ಪರಿಣಾಮ ಪಾದಚಾರಿಗಳಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಆನೇಕಲ್​ ತಾಲ್ಲೂಕಿನ ಹೆಬ್ಬಗೋಡಿ ಬಯೋಕಾನ್ ಕಂಪನಿ ಮುಂಭಾಗ ನಡೆದಿದೆ.

ಮೃತ ದುರ್ದೈವಿಗಳನ್ನು ಆಶಿಕ್ (28), ಮನೋಜ್ ಕುಮಾರ್(30) ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕ್ಯಾಂಟರ್ ಚಲಾಯಿಸಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ದುರ್ದೈವಿಗಳು

ಘಟನೆಯೂ ಆನೇಕಲ್​ ತಾಲ್ಲೂಕಿನ ಹೆಬ್ಬಗೋಡಿ ಪ್ರದೇಶದಲ್ಲಿರುವ ಬಯೋಕಾನ್ ಕಂಪನಿ ಮುಂಭಾಗನಡೆದಿದ್ದು, ಕ್ಯಾಂಟರ್ ಚಾಲಕ ಪಾನಮತ್ತನಾಗಿ ವಾಹನ ಚಾಲನೆ ಮಾಡಿತ್ತಿದ್ದ ಎಂದು ವರದಿಯಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸ್​​ ಬ್ಯಾರಿಕೇಡ್​ಗಳಿಗೆ ಗುದ್ದಿ ಕ್ಯಾಂಟರ್​ ಉರುಳಿ ಬಿದ್ದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಬ್ಬಗೋಡಿ ಪೊಲೀಸರು ಚಾಲಕ ಹಾಗೂ ಕ್ಲೀನರ್​ನನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ಧಾರೆ.