ಜಿಲ್ಲೆ

ಈಜುಸ್ಪರ್ಧೆಯಲ್ಲಿ 16 ಪದಕ

Avinash R

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು 7 ಚಿನ್ನ, 6 ಬೆಳ್ಳಿ ಹಾಗೂ 3 ಕಂಚು ಸಹಿತ ಒಟ್ಟು 16 ಪದಕಗಳನ್ನು ಪಡೆದುಕೊಂಡಿದ್ದಾರೆ.

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅಭಿಷೇಕ್ ವೈಯಕ್ತಿಕ ಪ್ರಶಸ್ತಿ ಪಡೆದಿದ್ದಾರೆ. 3 ವಿದ್ಯಾರ್ಥಿಗಳು ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಫಲಿತಾಂಶ:

14 ವರ್ಷ ವಯೋಮಿತಿ ಬಾಲಕರ ವಿಭಾಗ: ಅಭಿಷೇಕ್ 50 ಮೀ. ಫ್ರೀಸ್ಟೈಲ್(ಪ್ರಥಮ), 100 ಮೀ. ಫ್ರೀಸ್ಟೈಲ್(ಪ್ರ), 50 ಮೀ. ಬಟರ್‌ಫ್ಲೈ(ಪ್ರ), ವರ್ಚಸ್ವಿ ಎ.ಪಿ. 200 ಮೀ ಫ್ರೀಸ್ಟೈಲ್(ದ್ವಿ), 50 ಮೀ. ಬ್ಯಾಕ್‌ಸ್ಟ್ರೋಕ್(ದ್ವಿ), 100 ಮೀ. ಬ್ಯಾಕ್‌ಸ್ಟ್ರೋಕ್(ದ್ವಿ), 4100 ಮೀ. ಫ್ರೀಸ್ಟೈಲ್ ರಿಲೇ(ಪ್ರ), ಅಭಿನವ್ ಕೃಷ್ಣ ಎಚ್.ಆರ್. 4100 ಮೀ. ಫ್ರೀಸ್ಟೈಲ್ ರಿಲೇ(ಪ್ರ), ರಿತ್ವಿಜ್ 4100 ಮೀ. ಫ್ರೀಸ್ಟೈಲ್ ರಿಲೇ(ಪ್ರ), 100 ಮೀ. ಬಟರ್‌ಫ್ಲೈ(ತೃ), ಅದ್ವೈತ್ ಎಂ. 4*100 ಮೀ. ಫ್ರೀಸ್ಟೈಲ್ ರಿಲೇ(ಪ್ರ), 50 ಮೀ. ಬ್ರೆಸ್ಟ್‌ಸ್ಟ್ರೋಕ್(ತೃ), 100 ಮೀ. ಬ್ರೆಸ್ಟ್‌ಸ್ಟ್ರೋಕ್(ತೃ).

17 ವರ್ಷ ವಯೋಮಿತಿ ಬಾಲಕರ ವಿಭಾಗ: ಆಯುಷ್ ಪಿ.ಬಿ. 100 ಮೀ. ಫ್ರೀಸ್ಟೈಲ್(ದ್ವಿ), 100 ಮೀ. ಬ್ಯಾಕ್‌ಸ್ಟ್ರೋಕ್(ದ್ವಿ), 100 ಮೀ. ಬಟರ್‌ಫ್ಲೈ(ದ್ವಿ).
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ(ಆಡಳಿತ) ಮಂಗಳೂರು ಹಾಗೂ ಸೇಂಟ್ ಅಲೋಶಿಯಸ್ ಪ್ರೌಢಶಾಲೆ ಮಂಗಳೂರು ಆಶ್ರಯದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.