ಜಿಲ್ಲೆ

ಮುಂಡಾಜೆಯಲ್ಲಿ ಸಹಕಾರಿ ಭಾರತಿಗೆ 11 ಸ್ಥಾನ: ನ್ಯಾಯಾಲಯದ ತೀರ್ಪಿನ ಬಳಿಕ ಫಲಿತಾಂಶ ಅಧಿಕೃತ ಘೋಷಣೆ

ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 11 ಮಂದಿ ಬಹುಮತ ಗಳಿಸಿದ್ದಾರೆ.

ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ರಾಘವ ಗೌಡ ಕುಡುಮಡ್ಕ, ಅಜಯ್ ಎ.ಕೆ,

ಪ್ರಕಾಶ್ ನಾರಾಯಣ, ವೆಂಕಟೇಶ್ವರ ಭಟ್, ರವಿ ಪೂಜಾರಿ, ಸಾಲಗಾರ ಮಹಿಳಾ ಕ್ಷೇತ್ರದಿಂದ ಅಶ್ವಿನಿ ಹೆಬ್ಬಾರ್, ಮೋಹಿನಿ,ಹಿಂದುಳಿದ ಎ ವರ್ಗದಿಂದ ಶಶಿಧರ ಕಲ್ಮಂಜ, ಹಿಂದುಳಿನ ಬಿ ವರ್ಗದಿಂದ ಶಿವಪ್ರಸಾದ್, ಎಸ್.ಟಿ. ಮೀಸಲು ಕ್ಷೇತ್ರದಿಂದ ಚೆನ್ನಕೇಶವ ಅರಸಮಜಲು, ಎಸ್.ಸಿ. ಮೀಸಲು ಕ್ಷೇತ್ರದಿಂದ ರಾಘವ ಕಲ್ಮಂಜ, ಸಾಲೇತರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸುಮಾ ಗೋಖಲೆ ಜಯ ಗಳಿಸಿದ್ದಾರೆ.

ಸಹಕಾರ ಭಾರತಿ ಹಾಗೂ ಕಾಂಗ್ರೆಸ್‌ನಿಂದ ತಲಾ 12 ಮಂದಿ ಸ್ಪರ್ಧಿಸಿದ್ದರು. ಇದರ ಜತೆ ಅತೃಪ್ತರ ತಂಡದಿಂದ 12 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿ, ಒಟ್ಟು 36 ಅಭ್ಯರ್ಥಿಗಳು ಕಣದಲ್ಲಿದ್ದು ಚುನಾವಣೆ ಭಾರಿ ಕುತೂಹಲ ಕೆರಳಿಸಿತ್ತು. ಆದರೆ ಸಹಕಾರ ಭಾರತಿ ಬಹುಮತ ಪಡೆದಿದೆ.

ಮಹಾಸಭೆಗಳಿಗೆ ಹಾಜರಾಗದ ಕೆಲವು ಮತದಾರರು ನ್ಯಾಯಾಲಯದ ಮೂಲಕ ಮತ ಚಲಾಯಿಸಿರುವ ಕಾರಣ ಫಲಿತಾಂಶದ ಅಧಿಕೃತ ಘೋಷಣೆ ನ್ಯಾಯಾಲಯದ ತೀರ್ಪಿನ ಬಳಿಕ ಬರಲಿದೆ. ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ ಚುನಾವಣಾಧಿಕಾರಿಯಾಗಿದ್ದರು. ಸೊಸೈಟಿಯ ಸಿಇಒ ಚಂದ್ರಕಾಂತ ಪ್ರಭು ಮತ್ತು ಸಿಬ್ಬಂದಿ ಸಹಕರಿಸಿದರು.