ಜಿಲ್ಲೆ

ಕಾಮಗಾರಿ ನಡೆಸದೆ ಬಿಲ್​ ಪಾವತಿ ಆರೋಪ; 11 ಮಂದಿ ಬಿಬಿಎಂಪಿ ಅಧಿಕಾರಿಗಳು ಅಮಾನತು

Webdesk - Manjunatha B

ಬೆಂಗಳೂರು: ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕಾಮಗಾರಿ ನಡೆಸದೆ 250 ಕೋಟಿ ರೂ. ಮೊತ್ತದ ಬಿಲ್​ ಪಾವತಿ ಮಾಡಿದ ಆರೋಪದ ಮೇಲೆ ಆರ್​ಆರ್​ ನಗರ ಬಿಬಿಎಂಪಿ ವ್ಯಾಪ್ತಿಯಲ್ಲಿ ಟಿವಿಸಿಸಿ ವಿಭಾಗದ ಮುಖ್ಯ ಇಂಜಿನಿಯರ್ ದೊಡ್ಡಯ್ಯ ಸೇರಿದಂತೆ 11 ಮಂದಿಯನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್​ ನೀಡಿದ ದೂರಿನ ಮೇರೆಗೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಅವರಿಂದ 11 ಮಂದಿಯ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಅಮಾನತಾದ ಅಧಿಕಾರಿಗಳು

1) ದೊಡ್ಡಯ್ಯ, ಮುಖ್ಯ ಇಂಜಿನಿಯರ್ ಟಿವಿಸಿಸಿ ವಿಭಾಗ

2) ಸತೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಟಿವಿಸಿಸಿ ವಿಭಾಗ

3) ವಿಜಯ್ ಕುಮಾರ್, ಮುಖ್ಯ ಇಂಜಿನಿಯರ್, RR ನಗರ ವಲಯ.

4) ಶಿಲ್ಪಾ, ಸಹಾಯಕ ಇಂಜಿನಿಯರ್, RR ನಗರ ವಲಯ

ಸಾಂದರ್ಭಿಕ ಚಿತ್ರ

5) ಮೋಹನ್ ಮುಖ್ಯ ಇಂಜಿನಿಯರ್, ಯೋಜನಾ ವಿಭಾಗ RR ನಗರ ವಲಯ

6) ಭಾರತಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ RR ನಗರ ವಲಯ

7) ಬಸವರಾಜ್, ಕಾರ್ಯಪಾಲಕ ಇಂಜಿನಿಯರ್, RR ನಗರ ಉಪ ವಲಯ

8) ಸಿದ್ದಯ್ಯ, ಸಹಾಯಕ ಇಂಜಿನಿಯರ್, ವಾರ್ಡ್ 129 ಮತ್ತು 160.

9) ಉಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲಗ್ಗೆರೆ.

10) ಅನಿತಾ, ಸೂಪರಿಂಟೆಂಡೆಂಟ್, ಕ್ಯಾರಿಯರ್, RR ನಗರ ವಲಯ.

11) ಗೂಳಿಗೌಡ, ಡೆಪ್ಯುಟಿ ಮ್ಯಾನೇಜರ್, RR ನಗರ ವಲಯ.