ಜಿಲ್ಲೆ

11.76 ಕಿ.ಗ್ರಾಂ. ಗಾಂಜಾ ವಶ, ಆರೋಪಿ ಬಂಧನ

ಕಾಸರಗೋಡು: ಕುಬಣೂರಿನಲ್ಲಿ ಕಾಸರಗೋಡು ಅಬಕಾರಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಳಗೆ ಹಾಗೂ ಕಾರಿನಲ್ಲಿ ದಾಸ್ತಾನಿರಿಸಿದ್ದ 11.769 ಕಿ.ಗ್ರಾಂ. ಗಾಂಜಾ ವಶಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ಕಾಡಮೂಲೆ ನಿವಾಸಿ ಮೊಯ್ದೀನ್ ಶಬೀರ್ ಎಂಬಾತನನ್ನು ಬಂಧಿಸಿದ್ದಾರೆ. ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದಲ್ಲಿ ಆರೋಪಿ ಮನೆಗೆ ದಾಳಿ ನಡೆಸಿ ಮಲಗುವ ಕೊಠಡಿಯೊಳಗೆ ಮಂಚದ ತಳಭಾಗದಿಂದ ಹಾಗೂ ಮನೆ ವರಾಂಡದಲ್ಲಿ ನಿಲ್ಲಿಸಲಾಗಿದ್ದ ಕಾರಿನಿಂದ ಗಾಂಜಾ ವಶಪಡಿಸಲಾಗಿದೆ. ಮೊಯ್ದೀನ್ ಶಬೀರ್ ಈ ಹಿಂದೆ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜಾಮೀನಿನಲ್ಲಿ ಹೊರಬಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.