ಕೋಟತಟ್ಟು ಗ್ರಾಪಂ ಎಸ್‌ಎಲ್‌ಆರ್‌ಎಂ ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ಅಶ್ವಿನಿ, ಪಿಡಿಒ ರವೀಂದ್ರ ರಾವ್ ಮತ್ತಿತರರು ಇದ್ದರು.  
ಜಿಲ್ಲೆ

100 ಪ್ರತಿಶತ ಕಸ ಸಂಗ್ರಹಣೆ

ಇಂದಿರಾ ಎನ್ ಕೆ

ಕೋಟ: ಕೋಟತಟ್ಟು ಗ್ರಾಪಂ ಎಸ್‌ಎಲ್‌ಆರ್‌ಎಂನ ಪ್ರಗತಿ ಪರಿಶೀಲನಾ ಸಭೆ ಇತ್ತೀಚೆಗೆ ಕೋಟತಟ್ಟು ಗ್ರಾಪಂ ಸಭಾಭವನದಲ್ಲಿ ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ ನೇತೃತ್ವದಲ್ಲಿ ನಡೆಯಿತು. 100 ಪ್ರತಿಶತ ಕಸ ಸಂಗ್ರಹಣೆ ಮತ್ತು ವಸೂಲಾತಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ತಿಳಿಸಲಾಯಿತು. ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ಅಶ್ವಿನಿ, ಜ್ಯೋತಿ, ವಿದ್ಯಾ, ಸಾಹಿರ ಬಾನು, ಪಿಡಿಒ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಸಂಜೀವಿನಿ ಒಕ್ಕೂಟ ಸಖಿಯರು, ಸ್ವಚ್ಛ ವಾಹಿನಿ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.