ಜಿಲ್ಲೆ

ಒಂದೂವರೆ ಕೋಟಿ ಡೋಸ್ ಲಸಿಕೆ ನೀಡಿದ ಬಿಬಿಎಂಪಿ; ದೇಶದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಮೂರನೇ ಮಹಾನಗರ

Webdesk - Ravikanth

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜ.16 ರಿಂದ ಈವರೆಗೆ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲ ಸಾಮಾನ್ಯ ವರ್ಗದ ಜನರು ಸೇರಿ ಒಂದೂವರೆ ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.

ನಗರದಲ್ಲಿ ಶನಿವಾರ 361 ಸರ್ಕಾರಿ ಮತ್ತು 201 ಖಾಸಗಿ ಆಸ್ಪತ್ರೆಗಳಲ್ಲಿ ತೆರೆಯಲಾಗಿದ್ದ ಲಸಿಕಾ ಕೇಂದ್ರದಲ್ಲಿ ಒಟ್ಟು 42,872 ಮಂದಿಗೆ ಲಸಿಕೆ ನೀಡಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟ ಒಟ್ಟು 91.70 ಲಕ್ಷ ಜನರಿಗೆ ತಲಾ 2 ಡೋಸ್‌ಗಳಂತೆ 1.83 ಕೋಟಿ ಡೋಸ್ ಲಸಿಕೆ ನೀಡಬೇಕಿದೆ. ಈ ಪೈಕಿ ಶನಿವಾರದ ಅಂತ್ಯಕ್ಕೆ 1,50,32,626 ಡೋಸ್ ನೀಡಿಕೆ ಪೂರ್ಣಗೊಂಡಿದೆ.

ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಮೂರನೇ ಮಹಾನಗರ ಪಾಲಿಕೆ ಎನಿಸಿಕೊಂಡಿದೆ. ಇನ್ನು 33 ಲಕ್ಷ ಡೋಸ್ ಲಸಿಕೆ ನೀಡಿದಲ್ಲಿ ಪಾಲಿಕೆಯಿಂದ ನಿಗದಿಗೊಳಿಸಲಾಗಿದ್ದ ಗುರಿ ಶೇ.100 ತಲುಪಲಿದೆ. ಈ ವರೆಗೆ 83.37 ಲಕ್ಷ ಮಂದಿ (ಶೇ.91) ಮೊದಲ ಡೋಸ್ ಮತ್ತು 66.95 ಲಕ್ಷ ಮಂದಿ (ಶೇ.74) ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.