ನವದೆಹಲಿ: ಪೆಟ್ರೋಲ್, ಡೀಸೆಲ್ಗಾಗಿ ಇನ್ನು ಪೆಟ್ರೋಲ್ ಪಂಪ್ ಎಲ್ಲಿದೆ ಎಂದು ಹುಡುಕಾಡುವ ಕೆಲಸ ಭವಿಷ್ಯದಲ್ಲಿ ಇರಲ್ಲ. ಜಿಪಿಎಸ್ ಮತ್ತು ಜಿಯೋ ಫೆನ್ಸಿಂಗ್ ಅಳವಡಿಸಿರುವ ಮೊಬೈಲ್ ಪೆಟ್ರೋಲ್ಪಂಪ್ಗಳು ರಸ್ತೆ ತುಂಬ ಸಂಚರಿಸಲಿವೆ. ಈ ಹಣಕಾಸು ವರ್ಷದಲ್ಲೆ 3,200 ಮೊಬೈಲ್ ಪೆಟ್ರೋಲ್ ಪಂಪ್ಗಳನ್ನು ಉತ್ಪಾದಿಸಿ ಮಾರಾಟ ಮಾಡಲು ಸಜ್ಜಾಗಿದೆ ಪುಣೆ ಮೂಲದ ಸ್ಟಾರ್ಟಪ್ ರೆಪೋಸ್ ಎನರ್ಜಿ.
ಇದನ್ನೂ ಓದಿ: COVID19 ಟಾಪ್ ಹತ್ತರ ಪಟ್ಟಿಗೆ ಸೇರಿತು ಭಾರತ
ಪ್ರಸಿದ್ಧ ಉದ್ಯಮಿ ರತನ್ ಟಾಟಾ ಮೆಂಟರ್ ಆಗಿರುವ ಈ ಸ್ಟಾರ್ಟಪ್ ಇದಾಗಿದೆ. ರೆಪೋಸ್ ಮೊಬೈಲ್ ಪೆಟ್ರೋಲ್ ಪಂಪ್ಗಳು ಸುರಕ್ಷಿತ ಮತ್ತು ಕಾರ್ಯಕ್ಷಮತೆಯಿಂದ ಇರುವಂತೆ ಮಾಡುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿಕೊಂಡಿರುವ ಸ್ಟಾರ್ಟಪ್, ಉದ್ಯಮ ವಿಸ್ತರಣೆಯ ಯೋಜನೆಯನ್ನೂ ಹಾಕಿಕೊಂಡಿದೆ.
ದೇಶದಲ್ಲಿ ಸದ್ಯ 320 ರೆಪೋಸ್ ಪೆಟ್ರೋಲ್ ಪಂಪ್ಗಳಿದ್ದು, ಈ ಪೈಕಿ 100 ಕ್ಕು ಹೆಚ್ಚು ಪಂಪ್ಗಳು ಪೂರ್ಣಪ್ರಮಾಣದಲ್ಲಿ ಚಾಲ್ತಿಯಲ್ಲಿದೆ. ಆದರೆ ಈಗ ಒಂದು ವರ್ಷದ ಅವಧಿಯಲ್ಲಿ 3,200 ಪಂಪ್ಗಳು ಕಾರ್ಯನಿರತವಾಗುವಂತೆ ಮಾಡುವ ಸವಾಲು ಮತ್ತು ಗುರಿ ನಮ್ಮ ಎದುರಿದೆ. ಅದಿತಿ ಭೋಸಾಲೆ ವಾಲುನ್ಜ್ ಸಹ ಸಂಸ್ಥಾಪಕರು
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ
ದೇಶದಲ್ಲಿ ಸದ್ಯ ಇರುವ ಬೇಡಿಕೆಯನ್ನು ಈಡೇರಿಸುವುದಕ್ಕೆ 1 ಲಕ್ಷಕ್ಕೂ ಹೆಚ್ಚು ಪೆಟ್ರೋಲ್ ಪಂಪ್ಗಳ ಅವಶ್ಯಕತೆ ಇದೆ. ಆದರೆ ಇರುವುದು ಕೇವಲ 55,000 ಪೆಟ್ರೋಲ್ ಪಂಪ್ಗಳಷ್ಟೇ. ಇದು ಸಾಕಾಗುವುದಿಲ್ಲ. ಹೊಸ ಪೆಟ್ರೋಲ್ ಪಂಪ್ಗಳನ್ನು ಸ್ಥಾಪಿಸಬೇಕಾದರೆ ಜಮೀನು ಬೇಕು, ಸಾಕಷ್ಟು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದು ಭಾರಿ ವೆಚ್ಚದಾಯಕವಾಗಿದ್ದು, ಸುಲಭವಾಗಿ ಅನುಷ್ಠಾನಗೊಳಿಸುವಂತಿಲ್ಲ. ಇದಕ್ಕೆ ಪರಿಹಾರವಾಗಿ ರೆಪೋಸ್ ಮೊಬೈಲ್ ಪೆಟ್ರೋಲ್ ಪಂಪ್ಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಚೇತನ್ ವಾಲುನ್ಜ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ನ ಅತಿದೊಡ್ಡ ಮಾಧ್ಯಮ ಸಂಸ್ಥೆ ಕೇವಲ 1 ಡಾಲರ್ಗೆ ಮಾರಾಟ- ಖರೀದಿಸಿದ್ದು ಅದೇ ಸಂಸ್ಥೆಯ ಸಿಇಒ !
ದೇಶಾದ್ಯಂತ 1,200 ಆಪರೇಟರ್ಗಳು ಮೊಬೈಲ್ ಪೆಟ್ರೋಲ್ ಪಂಪ್ಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ರೆಪೋಸ್ ಪೆಟ್ರೋಲ್ ಪಂಪ್ಗಳು ಸುರಕ್ಷಿತ ಮತ್ತು ಕಟ್ಟಕಡೆಯ ಗ್ರಾಹಕರಿಗೆ ಇಂಧನ ಪೂರೈಸುವುದಕ್ಕೆ ಅನುಕೂಲಕರವಾದ ವಿನ್ಯಾಸವನ್ನೂ ಹೊಂದಿದೆ. ಈ ಪೆಟ್ರೋಲ್ ಪಂಪ್ಗಳ ನೈಜ ಸಮಯದ ಅಪ್ಡೇಟ್ ಪಡೆದುಕೊಳ್ಳುವುದಕ್ಕಾಗಿ ಟೆಕ್ನಾಲಜಿಯನ್ನೂ ಇವುಗಳಿಗೆ ಜೋಡಿಸಲಾಗಿದೆ. ಜಪಿಎಸ್ ಮತ್ತು ಜಿಯೋ ಫೆನ್ಸಿಂಗ್ ಅಳವಡಿಸಿರುವುದು ಈ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. (ಏಜೆನ್ಸೀಸ್)