More

    ನ್ಯೂಜಿಲೆಂಡ್​ನ ಅತಿದೊಡ್ಡ ಮಾಧ್ಯಮ ಸಂಸ್ಥೆ ಕೇವಲ 1 ಡಾಲರ್​ಗೆ ಮಾರಾಟ- ಖರೀದಿಸಿದ್ದು ಅದೇ ಸಂಸ್ಥೆಯ ಸಿಇಒ !

    ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ನ ಅತಿದೊಡ್ಡ ಮಾಧ್ಯಮ ಸಂಸ್ಥೆ ಸ್ಟಫ್ ಪ್ರಿಂಟ್ಸ್​ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಿಂದ ಹೊರಬರುವ ಸಲುವಾಗಿ ಅದನ್ನು ಕೇವಲ ಒಂದು ಡಾಲರ್​ಗೆ ಸಿಇಒಗೆ ಮಾರಾಟ ಮಾಡುತ್ತಿರುವುದಾಗಿ ಕಂಪನಿಯ ಮಾಲೀಕರು ಸೋಮವಾರ ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ನೈನ್​ ಎಂಟರ್​ಟೇನ್​ಮೆಂಟ್​ ಮಾಲೀಕತ್ವದ ಸ್ಟಫ್​ ಪ್ರಿಂಟ್ಸ್​ ಅಧೀನ ಅನೇಕ ದಿನಪತ್ರಿಕೆಗಳು, ಜನಪ್ರಿಯ ವೆಬ್​ಸೈಟ್​ಗಳನ್ಮನು ಹೊಂದಿದ್ದು, 400 ಪತ್ರಕರ್ತರು ಸೇರಿ 900 ಸಿಬ್ಬಂದಿಗಳಿದ್ದಾರೆ.

    ಇದನ್ನೂ ಓದಿ: ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?

    ಕರೊನಾ ಸಾಂಕ್ರಾಮಿಕ ರೋಗ ಹರಡುವುದಕ್ಕಿಂತಲೂ ಮೊದಲೇ ಸ್ಟಫ್​ ಪ್ರಿಂಟ್ಸ್​ ಹಣಕಾಸಿನ ಸಮಸ್ಯೆ ಎದುರಿಸಿತ್ತು. ಕರೊನಾ ಲಾಕ್​ಡೌನ್ ಶುರುವಾದ ಮೇಲೆ ಜಾಹೀರಾತಿನ ಆದಾಯವೂ ಸ್ಥಗಿತವಾಗಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು. ಹೀಗಾಗಿ ಈಗ ಕಂಪನಿಯನ್ನು ಸಿಇಒ ಸಿನೆಡ್​ ಬೌಚರ್​ಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತ ಪ್ರಕ್ರಿಯೆ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಆಸ್ಟ್ರೇಲಿಯಾ ಸ್ಟಾಕ್​ ಮಾರ್ಕೆಟ್​ಗೆ ಸಲ್ಲಿಸಿದ ಹೇಳಿಕೆಯಲ್ಲಿ ನೈನ್ ಎಂಟರ್​ಟೇನ್​ಮೆಂಟ್​ ತಿಳಿಸಿದೆ.

    ಇದನ್ನೂ ಓದಿ:  ಸೋಂಕಿಗೆ ಸೆನ್ಸ್ ಮಾಸ್ಕ್ ಶಾಕ್

    ನ್ಯೂಜಿಲೆಂಡ್​ನ ಅತಿದೊಡ್ಡ ಮಾಧ್ಯಮ ಸಂಸ್ಥೆ ಕೇವಲ 1 ಡಾಲರ್​ಗೆ ಮಾರಾಟ- ಖರೀದಿಸಿದ್ದು ಅದೇ ಸಂಸ್ಥೆಯ ಸಿಇಒ !ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ ಮಾಲೀಕತ್ವ ಇದ್ದರೆ ಮಾತ್ರವೇ ನಮ್ಮ ಸಿಬ್ಬಂದಿಗೆ, ಗ್ರಾಹಕರಿಗೆ ಅನುಕೂಲವಾದೀತು. ಇದನ್ನು ಒಂದು ಅವಕಾಶ ಎಂದು ತಿಳಿದುಕೊಂಡು ಹೂಡಿಕೆ ಮಾಡಿ ಈ ಉದ್ಯಮವನ್ನು ಬೆಳೆಸುತ್ತೇವೆ ಎಂದು ಬೌಚರ್ ಹೇಳಿದ್ದಾರೆ. ಸಿಇಒ ಬೌಚರ್ ಜತೆಗಿನ ಡೀಲ್ ಪ್ರಕಾರ ನೈನ್ ಎಂಟರ್​ಟೇನ್ ಮೆಂಟ್​ ವೆಲ್ಲಿಂಗ್ಟನ್​ನಲ್ಲಿರುವ ಮುದ್ರಣದ ಘಟಕದ ಮಾಲೀಕತ್ವ ಉಳಿಸಿಕೊಂಡಿದೆ. ಅದನ್ನು ಸ್ಟಫ್​ ಪ್ರಿಂಟ್ಸ್​ಗೆ ಲೀಸ್​ಗೆ ಬಿಟ್ಟುಕೊಡುತ್ತಿದೆ.

    ಇದನ್ನೂ ಓದಿ: ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ವಿರೋಧ

    ಸಿಇಒ ಜತೆಗಿನ ಡೀಲ್​ನೊಂದಿಗೆ ಸ್ಟಫ್ ಪ್ರಿಂಟ್ಸ್ ಅನ್ನು ಖರೀದಿಸಬೇಕು ಎಂಬ ಎದುರಾಳಿ ಕಂಪನಿ ಎನ್​ಝೆಡ್​ಎಂಇ ಯ ಪ್ರಯತ್ನ ಫಲಿಸಲಿಲ್ಲ. ಎರಡು ಕಂಪನಿಗಳ ನಡುವೆ ಹಲವು ಸುತ್ತಿನ ಮಾತುಕತೆಗಳಾದರೂ ಕೊನೆಗೆ ಅದು ನ್ಯಾಯಾಲಯದ ಮೆಟ್ಟಿಲೇರಿತ್ತು. ಸಿಇಒ ಜತೆಗಿನ ಡೀಲ್​​ಗೆ ತಾತ್ಕಾಲಿಕ ತಡೆ ನೀಡುವಂತೆ ಎನ್​ಝೆಡ್​ಎಂಇ ಕೋರ್ಟ್ ಮೊರೆ ಹೋಗಿತ್ತು. ಆದರೆ, ಕೋರ್ಟ್​ ಇದನ್ನು ನಿರಾಕರಿಸಿತ್ತು.

    ಇದನ್ನೂ ಓದಿ:  ವಿಶ್ವಗುರು: ಅಮೆರಿಕದ ದಾಳಕ್ಕೆ ಚೀನಾ ಪತರಗುಟ್ಟುವುದೇ?

    ಈ ನಡುವೆ, ಲಾಕ್​ಡೌನ್ ನಂತರದಲ್ಲಿ ನ್ಯೂಜಿಲೆಂಡ್​ನ ಬಹುತೇಕ ಮಾಧ್ಯಮ ಸಂಸ್ಥೆಗಳು ಹಣಕಾಸಿನ ತೊಂದರೆಗೆ ಒಳಗಾಗಿವೆ. ಸ್ಟಫ್​ ಪ್ರಿಂಟ್ಸ್ ಉದ್ಯೋಗಿಗಳ ವೇತನವನ್ನು ತಾತ್ಕಾಲಿಕವಾಗಿ ತಡೆ ಹಿಡಿದರೆ, ಅದನ್ನು ಖರೀದಿಸಲು ಪ್ರಯತ್ನಿಸಿದ್ದ ಎನ್​ಝೆಡ್​ಎಂಇ 200 ಉದ್ಯೋಗ ಕಡಿತವನ್ನು ಘೋಷಿಸಿದೆ. ಇದಲ್ಲದೆ, ಜರ್ಮನಿ ಮೂಲದ ಬೌರ್ ಮೀಡಿಯಾ ಕಳೆದ ತಿಂಗಳು ನ್ಯೂಜಿಲೆಂಡ್​​ನ ಆವೃತ್ತಿಯನ್ನು ಮೊಟಕುಗೊಳಿಸಿದೆ. ಇದೇ ರೀತಿ ಬ್ರಾಡ್​ಕಾಸ್ಟರ್​ ಮೀಡಿಯಾವರ್ಕ್ಸ್​ 130 ಸ್ಥಾನಗಳನ್ನು ಕಡಿತಗೊಳಿಸುವುದಾಗಿ ಸೋಮವಾರ ಘೋಷಿಸಿದೆ. (ಏಜೆನ್ಸೀಸ್​)

    ಹಾಕಿ ದಂತಕಥೆ ಬಲಬೀರ್ ಸಿಂಗ್​ ಸೀನಿಯರ್ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts