ಆಭರಣ ಪ್ರಿಯರಿಗೆ ಡಬಲ್ ಧಮಾಕ! ಸತತ 3 ದಿನಗಳಿಂದ ಚಿನ್ನ-ಬೆಳ್ಳಿಯ ಬೆಲೆ ಕುಸಿತ, ಇಂದು ಕೂಡ ಭಾರಿ ಇಳಿಕೆ...Gold And Silver Prices
- ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿಯುತ್ತಿವೆ
- ಕಳೆದ ಮೂರು ದಿನಗಳಿಂದ ಚಿನ್ನದ ದರಗಳು ತೀವ್ರವಾಗಿ ಕುಸಿಯುತ್ತಿದೆ
- ಇಂದು ಚಿನ್ನದ ಬೆಲೆ ಕೆಜಿಗೆ 3,110 ರೂ.ಗಳಷ್ಟು ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ ಕೆಜಿಗೆ 10,000 ರೂ.ಗಳಷ್ಟು ಇಳಿಕೆಯಾಗಿದೆ
Gold And Silver Prices : ನೀವು ಚಿನ್ನ ಮತ್ತು ಬೆಳ್ಳಿ ಖರೀದಿಸಲು ರೆಡಿಯಾಗುತ್ತಿದ್ದೀರಾ? ಹಾಗಾದರೆ, ನಿಮಗಾಗಿ ಒಂದು ಗುಡ್ ನ್ಯೂಸ್ ಇಲ್ಲಿದೆ. ಅದೇನೆಂದರೆ, ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿಯುತ್ತಿವೆ. ಕಳೆದ ಮೂರು ದಿನಗಳಿಂದ ಚಿನ್ನದ ದರಗಳು ತೀವ್ರವಾಗಿ ಕುಸಿಯುತ್ತಿದ್ದು, ಇಂದು ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಕೆ ಕಂಡಿವೆ. ಹಾಗಾದರೆ, ಇಂದಿನ ಬೆಲೆ ಎಷ್ಟು? ಎಷ್ಟು ಇಳಿಕೆಯಾಗಿದೆ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿಗಳ ಮಳೆ ಸುರಿಸುತ್ತಿದ್ದರೆ, ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಅದರಲ್ಲೂ ತಮ್ಮ ಸುಪ್ರೀಂ ಲೀಡರ್ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಿದ ಬಳಿಕ ಇರಾನ್, ಮದವೇರಿದ ಆನೆಯಂತೆ ಆಡುತ್ತಿದೆ. ಕೊನೆಯ ಹಂತದವರೆಗೂ ಹೋರಾಡುವುದಾಗಿ ಶಪಥ ಮಾಡಿದೆ. ಹೀಗಾಗಿ, ಯುದ್ಧ ತಣ್ಣಗಾಗುವ ಯಾವುದೇ ಲಕ್ಷಣಗಳು ಸದ್ಯ ಗೋಚರಿಸುತ್ತಿಲ್ಲ. ಇದರ ಪರಿಣಾಮದಿಂದ ಷೇರು ಮಾರುಕಟ್ಟೆಗಳು ಸಹ ಕುಸಿಯುತ್ತಿವೆ. ಯುದ್ಧದ ಪರಿಣಾಮದಿಂದ ಚಿನ್ನದ ಬೆಲೆ ಹೆಚ್ಚಾಗುತ್ತದೆ ಎಂದು ತಜ್ಞರು ಭವಿಷ್ಯ ನುಡಿದಿದ್ದರು. ಆದರೆ, ಚಿನ್ನದ ಬೆಲೆ ಅನಿರೀಕ್ಷಿತವಾಗಿ ಕುಸಿಯುತ್ತಿದೆ.
ಯುದ್ಧದ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆಯಾಗಬಹುದು ಎಂದು ಹೂಡಿಕೆದಾರರು ನಿರೀಕ್ಷಿಸುತ್ತಾರೆ. ಈ ಬಾರಿಯೂ ಆರಂಭದಲ್ಲಿ ಏರಿಕೆ ಕಂಡಿತ್ತು. ಆದರೆ, ಸೋಮವಾರದಿಂದ ಬೆಲೆಗಳು ಕುಸಿಯುತ್ತಿವೆ. ಇದಕ್ಕೆ ಪ್ರಮುಖ ಕಾರಣಗಳು ಕೂಡ ಇವೆ. ಅವುಗಳೆಂದರೆ, ಡಾಲರ್‌ನ ಬೇಡಿಕೆ ಹೆಚ್ಚಾಗಿದೆ ಮತ್ತು ಕೆಲವು ಕರೆನ್ಸಿಗಳ ವಿರುದ್ಧ ಅದರ ಮೌಲ್ಯವು ಮಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ವಿದೇಶಿಯರಿಗೆ ಡಾಲರ್‌ಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಕಷ್ಟಕರವಾಗಿಸಿದೆ. ಇನ್ನು ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದ ತೈಲ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೆಚ್ಚಾದಲ್ಲಿ, ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಇದು ಯುಎಸ್ ಬಡ್ಡಿದರಗಳನ್ನು ಕಡಿಮೆ ಮಾಡುವ ಸಾಧ್ಯತೆಗಳನ್ನು ಕಡಿಮೆ ಮಾಡಿದೆ. ಇದೆಲ್ಲವೂ ಅಮೂಲ್ಯ ಲೋಹಗಳ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡಿವೆ. ಇದರ ಪರಿಣಾಮವಾಗಿ, ಬೆಲೆಗಳು ಕುಸಿಯುತ್ತಿವೆ.
ಇಂದಿನ ಚಿನ್ನದ ಬೆಲೆ ಎಷ್ಟು?
ಇಂದು ಚಿನ್ನದ ಬೆಲೆ ಕೆಜಿಗೆ 3,110 ರೂ.ಗಳಷ್ಟು ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ ಕೆಜಿಗೆ 10,000 ರೂ.ಗಳಷ್ಟು ಇಳಿಕೆಯಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,110 ರೂ. ಇಳಿಕೆಯಾಗಿದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,64,510 ರೂ.ಗೆ ವಹಿವಾಟು ನಡೆಸುತ್ತಿದೆ. ಅದೇ ರೀತಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 2,850 ರೂ.ಗೆ ಇಳಿಕೆಯಾಗಿ 1,50,800 ರೂ.ಗೆ ಮಾರಾಟವಾಗುತ್ತಿದೆ. 18 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 2,340 ರೂ.ಗೆ ಇಳಿಕೆಯಾಗಿ 1,23,380 ರೂ.ಗೆ ವಹಿವಾಟು ನಡೆಸುತ್ತಿದೆ.
ಬೆಂಗಳೂರಿನಲ್ಲಿ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,63,530 ರೂ. ಇದೆ. ನಿನ್ನೆ 1,64,510 ರೂ. ಇತ್ತು. ಅಲ್ಲಿಗೆ, 980 ರೂಪಾಯಿ ಕುಸಿತ ಕಂಡಿದೆ. ಅದೇ ರೀತಿ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,49,900 ರೂ.ಗೆ ಮಾರಾಟವಾಗುತ್ತಿದ್ದು, ನಿನ್ನೆಯ 1,50,800 ರೂ. ಬೆಲೆಗೆ ಹೋಲಿಸಿದರೆ, 900 ರೂಪಾಯಿ ಕುಸಿತ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಎಷ್ಟು?
ಬೆಳ್ಳಿ ಬೆಲೆಯಲ್ಲೂ ಇಂದು ಭಾರಿ ಇಳಿಕೆ ಕಂಡುಬಂದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 10,000 ರೂ.ಗಳಷ್ಟು ಕುಸಿದಿದ್ದು, 2,85,000 ರೂ.ಗಳಿಗೆ ಮಾರಾಟವಾಗುತ್ತಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 2,95,000 ರೂ.ಗಳಿಗೆ ವಹಿವಾಟು ನಡೆಸಲಾಗುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 2,85,000 ರೂ.ಗಳಿಗೆ ಮಾರಾಟವಾಗುತ್ತಿದೆ, (ಏಜೆನ್ಸೀಸ್).