ನವದೆಹಲಿ: ದೇಶದ ಮುಂಚೂಣಿ ಉದ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಜಿಯೋ ಪ್ಲಾಟ್ಫಾರಂನಲ್ಲಿ ಸೌದಿಯ ಸಂಪತ್ತು ಹೂಡಿಕೆಯಾಗುತ್ತಿದೆ. ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಜಿಯೋ ಫ್ಲಾಟ್ಫಾರಂನಲ್ಲಿ ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್(ಪಿಐಎಫ್) ಹೂಡಿಕೆ ಮಾಡಲು ಮುಂದಾಗಿದೆ.
ಗುರುವಾರ ಘೋಷಿಸಲ್ಪಟ್ಟಿರುವ ಮಾಹಿತಿ ಪ್ರಕಾರ, ಜಿಯೋ ಫ್ಲಾಟ್ಫಾರಂನ ಶೇಕಡ 2.32 ಈಕ್ವಿಟಿಯನ್ನು ಪಿಐಎಫ್ ಹೊಂದಲಿದ್ದು, ಇದಕ್ಕಾಗಿ ಅದು 11,360 ಕೋಟಿ ರೂಪಾಯಿ(1.49 ಬಿಲಿಯನ್ ಡಾಲರ್)ಯನ್ನು ಹೂಡಿಕೆ ಮಾಡಲಿದೆ. ಈ ಹೂಡಿಕೆಯೊಂದಿಗೆ ಜಿಯೋ ಪ್ಲಾಟ್ಫಾರಂ 2020ರ ಏಪ್ರಿಲ್ನಿಂದೀಚೆಗೆ 1,15,693.95 ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡಂತಾಗಿದೆ.
ಇದನ್ನೂ ಓದಿ: VIDEO|ಗಡ್ಡ ಪ್ರಿಯರು ತಲೆ ಕೆಡಿಸಿಕೊಳ್ಳಬೇಕಾದ ಸುದ್ದಿ!
ಪಿಐಎಫ್ ಹೊರತುಪಡಿಸಿ, ಫೇಸ್ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬದಾಲಾ, ಎಡಿಐಎ, ಟಿಪಿಜಿ ಮತ್ತು ಎಲ್ ಕಾಟರ್ಟನ್ ಈವರೆಗಿನ ಹೂಡಿಕೆದಾರರು. ಜಿಯೋ ಪ್ಲಾಟ್ಫಾರಂನಲ್ಲಿ ಈ ಹೂಡಿಕೆ ಮೌಲ್ಯ 4.91 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಉದ್ಯಮ ಮೌಲ್ಯ 5.16 ಲಕ್ಷ ಕೋಟಿ ರೂಪಾಯಿ ಆಗಿರಲಿದೆ. (ಏಜೆನ್ಸೀಸ್)